ಶಾಸಕ ಮುನಿರತ್ನ ವಿರುದ್ಧ ದಾಖಲಾಗಿರುವ ಪ್ರಕರಣಗಳ ತನಿಖೆಗಾಗಿ ರಾಜ್ಯ ಸರ್ಕಾರವು ವಿಶೇಷ ತನಿಖಾ ತಂಡವನ್ನು ರಚಿಸಿ ಆದೇಶಿಸಿದ್ದಾರೆ.
ಎಸ್ಐಟಿ (ಸ್ಪೆಷಲ್ ಇನ್ವೆಸ್ಟಿಗೇಷನ್ ಟೀಮ್) ಇದರ ಮುಖ್ಯಸ್ಯರಾಗಿ ಅಪರ ಪೊಲೀಸ್ ಮಹಾನಿರ್ದೇಶಕರು ಆರ್ಥಿಕ ಅಪರಾಧಗಳು, ಸಿಐಡಿ ಆಗಿರುವಂತ ಬಿ.ಕೆ.ಸಿಂಗ್,ಐ.ಪಿ.ಎಸ್ರವರನ್ನು ನೇಮಕ ಮಾಡಲಾಗಿದ್ದು, ಈ ಎಸ್ಐಟಿ ಯಲ್ಲಿ ಲಾಬೂರಾಮ್, ಐಪಿಎಸ್ ಪೊಲೀಸ್ ಮಹಾ ನಿರೀಕ್ಷಕರು ಕೇಂದ್ರ ವಲಯ ಇವರನ್ನು ಸದಸ್ಯರನ್ನಾಗಿ,ಶ್ರೀಮತಿ ಸೌಮ್ಯಲತಾ,ಐಪಿಎಸ್, ಪೊಲೀಸ್ ಅಧೀಕ್ಷಕರು ರೈಲ್ವೇಸ್ ಇವರನ್ನು ಸದಸ್ಯರನ್ನಾಗಿ,ಶ್ರೀ ಸಿ.ಎ. ಸೈಮನ್, ಐಪಿಎಸ್ ಪೊಲೀಸ್ ಅಧೀಕ್ಷಕರು ಇವರನ್ನೂ ಸದಸ್ಯರನ್ನಾಗಿ ನೇಮಸಿ ಪ್ರಸ್ತುತ ನಾಲ್ಕು ಸದಸ್ಯರನ್ನೊಳಗೊಂಡ ಒಂದು ಸ್ಪೆಷಲ್ ಇನ್ವೆಸ್ಟಿಗೇಷನ್ ಟೀಮ್ ಅನ್ನು ಸರ್ಕಾರ ರಚನೆ ಮಾಡಿ ಆದೇಶಿಸಿದೆ.
ಮುನಿರತ್ನ ಮೇಲೆ ಒಟ್ಟು ಮೂರು ಪ್ರಕರಣಗಳು ದಾಖಲಾಗಿದ್ದು,ಒಂದು ವೈಯ್ಯಾಲಿಕಾವಲ್ ಪೊಲೀಸ್ ಠಾಣೆಯಲ್ಲಿ ಎರಡು ಮೊಕದ್ದಮೆಗಳು ದಾಖಲಾಗಿದ್ದು ಮೊಕದ್ದಮೆ ಸಂಖ್ಯೆ 121/2024, ಮೊಕದ್ದಮೆ ಸಂಖ್ಯೆ 122/2024, ಹಾಗೂ ಕಗ್ಗಲೀಪುರ ಪೊಲೀಸ್ ಠಾಣೆಯಲ್ಲಿ ಮೊಕದ್ದಮೆ ಸಂಖ್ಯೆ 312/2024ದಾಖಲಾಗಿದ್ದು ಈ ಮೂರು ಪ್ರಕರಣಗಳ ತನಿಖೆಯನ್ನು ಸರ್ಕಾರ ಎಸ್ಐಟಿ ಗೆ ವಹಿಸಿ ಆದೇಶಿಸಿದೆ.
ಪೊಲೀಸ್ ಮಹಾನಿರ್ದೇಶಕರು ಸಿಐಡಿ ಇವರ ಮೇಲ್ವಿಚಾರಣೆಯಲ್ಲಿ ತನಿಖಾ ತಂಡವು ಕಾರ್ಯ ನಿರ್ವಹಿಸಲಿದೆ.
ಪಾರದರ್ಶಕ ತನಿಖೆಯನ್ನು ಎದುರು ನೋಡುವ ಉದ್ದೇಶದಿಂದ ಈ ತನಿಖಾ ತಂಡವನ್ನು ರಚನೆ ಮಾಡಲಾಗಿದೆ.