ವಯ್ಯಾಲಿಕಾವಲ್ ನಲ್ಲಿ ಹತ್ಯೆಯಾದ ಮಹಾಲಕ್ಷ್ಮಿ ಪ್ರಕರಣದ ಆರೋಪಿ ಮುಕ್ತಿ ರಂಜನ್ ರಾಯ್ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಇದೀಗ ಆತನ ಡೆತ್ ನೋಟ್ ಸಿಕ್ಕಿದ್ದು, ಕೊಲೆಗೆ ಕಾರಣ ಬಹಿರಂಗವಾಗಿದೆ. ಕೊಲೆ ಮಾಡಿದ ನಂತರ ಆರೋಪಿ ತನ್ನ ತವರು ಓಡಿಶಾಗೆ ಪರಾರಿಯಾಗಿದ್ದ. ಪೊಲೀಸರು ಹುಡುಕಾಟ ನಡೆಸುತ್ತಿದ್ರುಈ ನಡುವೆ ಆರೋಪಿ ತನ್ನ ಗ್ರಾಮದ ಸ್ಮಶಾನದ ಬಳಿ ಮರಕ್ಕೆ ನೀನು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಅದಕ್ಕೂ ಮೊದಲು ಡೆತ್ ನೋಟ್ ಬರೆದಿದ್ದಾನೆ.
ಅದರಲ್ಲಿ ಮಹಾಲಕ್ಷ್ಮಿ ಕೊಲೆ ಮಾಡಿದ್ದು ನಾನೇ ಎಂದು ಹೇಳಿಕೊಂಡಿದ್ದಾನೆ.ಸೆಪ್ಟೆಂಬರ್ 3 ರಂದು ನಾನು ವಯ್ಯಾಲಿಕಾವಲ್ ನ ಮಹಾಲಕ್ಷ್ಮಿ ಮನೆಗೆ ಹೋಗಿದ್ದೆ. ಕೆಲ ಕಾರಣಕ್ಕಾಗಿ ಆಕೆ ನನ್ನ ಜೊತೆ ಜಗಳ ಮಾಡುತ್ತಿದ್ದಳು. ಅವತ್ತು ಕೂಡಾ ನನ್ನ ಜೊತೆ ಜಗಳ ತೆಗೆದಿದ್ದಳು. ಸಾಲದು ಎಂಬಂತೆ ನನ್ನ ಮೇಲೆ ಹಲ್ಲೆ ಮಾಡಿದ್ದಳು.
ಇದರಿಂದ ಕೋಪಗೊಂಡು ನಾನು ತೀವ್ರ ಹಲ್ಲೆ ಮಾಡಿದೆ.ನಾನೇ ಮಹಾಲಕ್ಷ್ಮಿ ಕೊಲೆ ಮಾಡಿದ್ದು ಎಂದು ಮುಕ್ತಿ ರಂಜನ್ ಬರೆದು ಕೊಂಡಿದ್ದಾನೆ. ಆಕೆಯ ವರ್ತನೆಯಿಂದ ಬೇಸತ್ತು ಈ ಕೃತ್ಯ ಮಾಡಿದ್ದೇನೆ ಎಂದು ಬರೆದಿದ್ದಾನೆ.