ತರಗತಿಗಳಿಗೆ ಮಿತಿಗಿಂತ ಹೆಚ್ಚು ಗೈರು ಹಾಜರಾಗಿ ಪರೀಕ್ಷೆಗೆ ಕೂರಲು ಅನರ್ಹವಾದ ವಿದ್ಯಾರ್ಥಿಗಳನ್ನು ಪರೀಕ್ಷೆಗೆ ಕುಳಿತುಕೊಳ್ಳಲು ಅವಕಾಶ ನೀಡಲು ಹಣ ಪಡೆದ ಆರೋಪದ ಮೇಲೆ ಪ್ರಾಂಶುಪಾಲ ಮತ್ತು ಪ್ರಥಮ ದರ್ಜೆ ಸಹಾಯಕನನ್ನು ಲೋಕಾಯುಕ್ತ ಅರೆಸ್ಟ್ ಮಾಡಿದೆ.
ಚಿಕ್ಕಮಗಳೂರಿನ ಬೀರೂರು ಪ್ರಥಮ ದರ್ಜೆ ಕಾಲೇಜಿನ ಜೀವಶಾಸ್ತ್ರ ಉಪನ್ಯಾಸಕ ಬಿ.ಟಿ. ಹರೀಶ್ ಎಂಬವರ ಮೂಲಕ ವಿದ್ಯಾರ್ಥಿಗಳಲ್ಲಿ ಹಣದ ಬೇಡಿಕೆಯನ್ನು ಇಟ್ಟು ಹಣ ಪಡೆದ ಹಿನ್ನೆಲೆಯಲ್ಲಿ ಇಬ್ಬರನ್ನು ಬಂಧಿಸಲಾಗಿದೆ ಎಂದು ತಿಳಿದು ಬಂದಿದೆ.
ಪ್ರಥಮ ದರ್ಜೆ ಸಹಾಯಕ ಸದಾಶಿವಯ್ಯ ಎಂಬವರು ಫೋನ್ ಪೇ ಮೂಲಕ 10 ಸಾವಿರ ರೂ, ಪಡೆದಿದ್ದು, ಹಾಗೂ ಪ್ರಾಂಶುಪಾಲ ಎಂ.ಕೆ. ಪ್ರವೀಣ್ ಕುಮಾರ್ 5 ಸಾವಿರ ರೂ. ಪಡೆಯುವಾಗ ಸಿಕ್ಕಿ ಬಿದ್ದಿದ್ದಾರೆ.ಈ ಹಿನ್ನೆಲೆಯಲ್ಲಿ ಪ್ರಾಂಶುಪಾಲ ಎಂ.ಕೆ ಪ್ರವೀಣ್ ಕುಮಾರ್ ಮತ್ತು ಪ್ರಥಮ ದರ್ಜೆ ಸಹಾಯಕ ಸದಾಶಿವಯ್ಯ ಎಂಬವರನ್ನು ಲೋಕಾಯುಕ್ತ ಪೊಲೀಸರು ಬಂಧಿದ್ದಾರೆ.