28.7 C
Bengaluru
Tuesday, October 8, 2024

ರೋಡ್ ರೇಜ್ ನಿಂದ ಶುರುವಾದದ್ದು ಮಾರಣಾಂತಿಕ ಹಲ್ಲೆಯಿಂದ ಅಂತ್ಯ…

Date:

ದ್ವಿಚಕ್ರ ವಾಹನಕ್ಕೆ ಅಡ್ಡ ಬಂದ ಯುವತಿಗೆ ವ್ಯಕ್ತಿಯೊಬ್ಬ ನಿಂದನೆ ಮಾಡಿದ್ದಾನೆ. ಈ ವೇಳೆ ವ್ಯಕ್ತಿಯೊಬ್ಬ ಯುವತಿ ಪರ ಮಾತನಾಡಿದ್ದಕ್ಕೆ ಮಚ್ಚಿನಿಂದ ಮಾರಣಾಂತಿಕ ಹಲ್ಲೆ ಮಾಡಲಾಗಿದೆ.ತುಮಕೂರು ನಗರದ ಮರಳೂರು‌ ದಿಣ್ಣೆಯಲ್ಲಿ ಈ ಘಟನೆ ನಡೆದಿದೆ.

ಇರ್ಫಾನ್ ಮಚ್ಚಿನಿಂದ ಹಲ್ಲೆ ನಡೆಸಿದ ಆರೋಪಿ. ವಿಲೀಂಗ್ ಮಾಡುತ್ತಿದ್ದ ಇರ್ಫಾನ್ ಬೈಕ್ ಗೆ ಅಡ್ಡ ಬಂದ ಯುವತಿಯನ್ನ ಕೆಳಗೆ ತಳ್ಳಿದ ಇರ್ಫಾನ್.ಕೆಳಗೆ ಬಿದ್ದಿದ್ದ ಯುವತಿಯನ್ನ ಚುಡಾಯಿಸಿ ಜಗಳ ಮಾಡಿದ್ದ ಇರ್ಫಾನ್ ಯುವತಿಯ ರಕ್ಷಣೆಗೆ ಬಂದಿದ್ದ ಸಾಧಿಕ್.

ಆರೋಪಿ ಇರ್ಫಾನ್ ಗೆ ಬೈದು ಬುದ್ದಿ ಹೇಳಿ, ಯುವತಿಯ ರಕ್ಷಣೆ ಮಾಡಿದ, ಇದರಿಂದ ಕೋಪಗೊಂಡ ಇರ್ಫಾನ್ ಸ್ನೇಹಿತರೊಂದಿಗೆ ಆಗಮಿಸಿ ಸಾಧಿಕ್ ಮೇಲೆ ಮನಸೋ ಇಚ್ಚೆ .ಕುತ್ತಿಗೆ, ಕೈಗೆ ತಲೆಗೆ ಲಾಂಗ್ ನಿಂದ ಹಲ್ಲೆ ಮಾಡಿರುತ್ತಾರೆ.ಸಾಧಿಕ್ (30) ಸ್ಥಿತಿ ಗಂಭೀರವಾಗಿದೆ , ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲು.

ಹಲ್ಲೆ ಮಾಡಿರುವ ಇರ್ಫಾನ್ ಮತ್ತು ಆತನ ಸ್ನೇಹಿತರು ಸ್ಥಳದಿಂದ ಪರಾರಿಯಾಗಿದ್ದಾರೆ,ಆರೋಪಿಗಳಿಗಾಗಿ ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ. ಈ ಪ್ರಕರಣ ಪೊಲೀಸ್ ದೂರು ದಾಖಲಿಸಿಕೊಂಡು ತನಿಖೆ ಮಾಡುತ್ತಿದ್ದಾರೆ. ಜಯನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಮೀತಿಮೀರಿದ ರೋಡ್ ರೇಜ್ ಗೆ ಕಡಿವಾಣ ಹಾಕಲು ಪೊಲೀಸ್ ಸಿದ್ದವಾಗಿದೆ ಎಂದು ತಿಳಿಸಿದ್ದಾರೆ.

ವರದಿ : ಆಂಟೋನಿ ಬೇಗೂರು

Latest Stories

LEAVE A REPLY

Please enter your comment!
Please enter your name here