28.7 C
Bengaluru
Tuesday, October 8, 2024

*ಕಾರ್ಗಲ್ ಪೊಲೀಸ್ ಠಾಣೆಗೆ ಹೊಸ ಬೊಲೆರೋ*

Date:

ಸಾಗರ ತಾಲ್ಲೂಕಿನ ಕಾರ್ಗಲ್ ಪೊಲೀಸ್ ಠಾಣೆಗೆ ಶಾಸಕ ಬೇಳೂರು ಗೋಪಾಲಕೃಷ್ಣ ಅವರು ನೂತನ ಬೊಲೇರೋ ವಾಹನವನ್ನು ಹಸ್ತಾಂತರಿಸಿದರು.ಶಿವಮೊಗ್ಗ ಜಿಲ್ಲೆಯ ಸಾಗರ ನಗರದ ಡಿವೈಎಸ್ಪಿ ಕಚೇರಿಯಲ್ಲಿ ಇಂದು ಕಾರ್ಗಲ್ ಪೊಲೀಸ್ ಠಾಣೆಗೆ ಶಾಸಕರ ಅನುದಾನದಲ್ಲಿ ಖರೀದಿಸಿದ್ದಂತ ನೂತನ ಬೊಲೇರೋ ವಾಹನವನ್ನು ಶಾಸಕ ಬೇಳೂರು ಗೋಪಾಲಕೃಷ್ಣ ಹಸ್ತಾಂತರಿಸಿ, ಹಸಿರು ನಿಶಾನೆ ತೋರಿದರು.

ಈ ಬಳಿಕ ಮಾತನಾಡಿದಂತ ಅವರು, ಕಾರ್ಗಲ್ ಠಾಣೆಯ ವ್ಯಾಪ್ತಿಯು ಕಾರ್ಗಲ್, ಬಾರಂಗಿ, ಜೋಗಾ ಒಳಗೊಂಡು 170 ಕಿ.ಮೀ ವ್ಯಾಪ್ತಿಯನ್ನು ಒಳಗೊಂಡಿದೆ. ಈ ಠಾಣೆಯಲ್ಲಿ ವಾಹನ ಹಳೆಯದಾಗಿದ್ದು ಕಂಡು ನಾನೇ ಒಂದು ದಿನ ಹೊಸ ವಾಹನ ಕೊಡಿಸುವುದಾಗಿ ಹೇಳಿದ್ದೆ. ಅದರಂತೆ ಇಂದು ಹೊಸ ವಾಹನವನ್ನು ಹಸ್ತಾಂತರಿಸಿದ್ದೇನೆ. ಇನ್ಮುಂದೆ ಜನತೆಯ ಕಷ್ಟಕ್ಕೆ ಸ್ಪಂದಿಸುವಂತ ಕೆಲಸ ತ್ವರಿತವಾಗಲಿ ಎಂದರು.ಬಾರಂಗಿ ಹೋಬಳಿಯ ಕಟ್ಟಿನಕಾರಿಯಲ್ಲಿ ಹೊಸದಾಗಿ ಪೊಲೀಸ್ ಠಾಣೆ ನೀಡಬೇಕು ಎಂಬುದು ಆ ಭಾಗದ ಜನರ ಒತ್ತಾಯ, ಮನವಿಯಾಗಿದೆ.

ಈಗಾಗಲೇ ಗೃಹ ಸಚಿವರೊಂದಿಗೆ ಒಂದು ಬಾರಿ ಮಾತನಾಡಿದ್ದೇನೆ. ಅವರು ಸಕಾರಾತ್ಮಕವಾಗಿಯೇ ಸ್ಪಂದಿಸಿದ್ದಾರೆ ಎಂದು ಹೇಳಿದರು.ಶಿವಮೊಗ್ಗ ನಗರ, ಸಾಗರ ನಗರದಲ್ಲಿ ಈ ಬಾರಿ ಗಣೇಶ ಮೂರ್ತಿ ವಿಸರ್ಜನೆಯ ವೇಳೆಯಲ್ಲಿ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಪೊಲೀಸರು ಉತ್ತಮವಾಗಿ ಕರ್ತವ್ಯ ನಿರ್ವಹಿಸಿದ್ದಾರೆ. ಇದಕ್ಕೆ ಕಾರಣವಾದಂತ ಜಿಲ್ಲಾ ರಕ್ಷಣಾಧಿಕಾರಿ ಮಿಥುನ್ ಕುಮಾರ್, ಸಾಗರ ಡಿವೈಎಸ್ಪಿ ಗೋಪಾಲಕೃಷ್ಣ ನಾಯಕ್ ಅವರಿಗೆ ಧನ್ಯವಾದಗಳನ್ನು ತಿಳಿಸಿದರು.

ಇದೇ ವೇಳೆ ಮಾತನಾಡಿದಂತ ಶಿವಮೊಗ್ಗ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಿಥುನ್ ಕುಮಾರ್ ಅವರು, ಪೊಲೀಸ್ ಇಲಾಖೆಗೆ ಮೊಬೈಲಿಟಿ ತುಂಬಾನೇ ಇಂಪಾರ್ಡೆಂಟ್ ಆಗಿದೆ. ಕಾರ್ಗಲ್ ಮಲೆನಾಡಿನ ಭಾಗವಾಗಿದ್ದು, ಯಾವುದೇ ಘಟನೆಯಾದಾಗ ಅಲ್ಲಿಗೆ ತೆರಳಲು ವಾಹನದ ತುರ್ತು ಅವಶ್ಯಕತೆ ಇತ್ತು. ಅದನ್ನು ಇಂದು ಶಾಸಕರು ಒದಗಿಸಿಕೊಟ್ಟಿದ್ದಾರೆ ಎಂದರು.ಶಾಸಕ ಬೇಳೂರು ಗೋಪಾಲಕೃಷ್ಣ ಅವರು ಉತ್ತಮ ಕೆಲಸ ಕಾರ್ಯ ಮಾಡುತ್ತಿದ್ದಾರೆ.

ಪೊಲೀಸ್ ಇಲಾಖೆಗೆ ಬೇಕಿದ್ದಂತ ವಾಹನವನ್ನು ಇಂದು ಹಸ್ತಾಂತರಿಸಿದ್ದಾರೆ. ಇಂತಹ ಶಾಸಕರಿಗೆ ಇಲಾಖೆಯ ವತಿಯಿಂದ ಹೃತ್ಪೂರ್ವಕ ಧನ್ಯವಾದ ಅರ್ಪಿಸಿದರು.ಈ ಸಂದರ್ಭದಲ್ಲಿ ಡಿವೈಎಸ್‌ಪಿ ಗೋಪಾಲಕೃಷ್ಣ ನಾಯಕ್, ಸಾಗರ ಗ್ರಾಮಾಂತರ ಠಾಣೆಯ ಪೊಲೀಸ್ ಇನ್ಸ್ ಪೆಕ್ಟರ್ ಗಳಾದ ಮಹಾಬಲೇಶ್ವರ ನಾಯ್ಕ್, ಸಾಗರ ಟೌನ್ ಠಾಣೆಯ ಪೊಲೀಸ್ ಇನ್ಸ್ ಪೆಕ್ಟರ್ ಸೀತಾರಾಮ್, ಸಬ್ ಇನ್ಸ್ ಪಕ್ಟರ್ ಹೊಳಬಸಪ್ಪ ಹೋಳಿ ಸೇರಿದಂತೆ ಇತರರು ಉಪಸ್ಥಿತರಿದ್ದರು.

Latest Stories

LEAVE A REPLY

Please enter your comment!
Please enter your name here