ಸಾಫ್ಟ್‌ವೇರ್ ಎಂಜಿನಿಯರ್ ಆಗಿ ಕೆಲಸ ಮಾಡುವ ಶ್ರುತಿ ಎಂಬಾಕೆ ವಂಶಿಕೃಷ್ಣರೆಡ್ಡಿ ಎಂಬಾತನನ್ನು ಪ್ರೀತಿಸುತ್ತಿದ್ದಳು. ಆದ್ರೆ ಬೇರೆ ಯಾವುದೋ ವೈಯಕ್ತಿಕ ಕಾರಣಕ್ಕೆ ಶ್ರುತಿಗೆ ಆತನಿಂದ ದೂರ ಆಗಬೇಕು ಎನಿಸಿದೆ. ದೂರ ಆಗಬೇಕಾದರೆ ಮೊದಲು ಆತನ ಮೊಬೈಲ್‌ನಲ್ಲಿರುವ ಖಾಸಗಿ ವಿಡಿಯೋ, ಫೋಟೋಗಳನ್ನು ಡಿಲೀಟ್ ಮಾಡಬೇಕಿತ್ತು. ಅದಕ್ಕಾಗಿ ಶ್ರುತಿ ಖತರ್ನಾಕ್ ಪ್ಲ್ಯಾನ್ ಒಂದನ್ನು ಮಾಡಿದ್ದಳು ಆದ್ರೆ ಪ್ಲ್ಯಾನ್ ಏನೋ ಸಕ್ಸಸ್ ಆಗಿದೆ. ಅದರ ನಂತರ ಆ ಪ್ಲ್ಯಾನ್ ಆಕೆಗೇ ತಿರುಮಂತ್ರಿ ಹೇಳಿದೆ. ಹೀಗಾಗಿ ಬಂಧನವಾಗಿ ಜೈಲು ಸೇರಿದ್ದಾಳೆ.
ಸಾಫ್ಟ್‌ವೇರ್ ಎಂಜಿನಿಯರ್ ಆಗಿ ಕೆಲಸ ಮಾಡುವ ಶ್ರುತಿ ಹಾಗೂ ಇತರ ಮೂವರನ್ನು ಬೆಳ್ಳಂದೂರು ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಇದಕ್ಕೆ ಕಾರಣ ಅವರು ಮಾಡಿರುವ ಘನಂದಾರಿ ಕೆಲಸ. ಯಾಕಂದ್ರೆ ಮೂವರು ಹುಡುಗರಿಗೆ ತನ್ನ ಪ್ರಿಯತಮನಿಂದ ಮೊಬೈಲ್ ರಾಬರಿ ಮಾಡೋದಕ್ಕೆ ಒಂದೂವರೆ ಲಕ್ಷ ರೂಪಾಯಿ ಸುಪಾರಿ ಕೊಟ್ಟಿರುತ್ತಾಳೆ ಶ್ರುತಿ. ಪ್ಲ್ಯಾನ್‌ನಂತೆ ಶ್ರುತಿ ತನ್ನ ಪ್ರಿಯತಮ ವಂಶಿಕೃಷ್ಣರೆಡ್ಡಿಯನ್ನು ಬೈಕ್‌ನಲ್ಲಿ ಕರೆದುಕೊಂಡು ಬರುತ್ತಿರುತ್ತಾಳೆ. ಈ ವೇಳೆಯೇ ಕಾರಿನಲ್ಲಿ ಬಂದ ಸುಪಾರಿ ರಾಬರಿ ಮಾಡುವವರು ಆ ಬೈಕ್‌ಗೆ ಡಿಕ್ಕಿ ಹೊಡೆಯುತ್ತಾರೆ.
ನಂತರ ವಂಶಿಕೃಷ್ಣ ರೆಡ್ಡಿ ಜೊತೆ ಜಗಳ ಮಾಡುತ್ತಾರೆ. ಆತನಿಂದ ಮೊಬೈಲ್ ಕಿತ್ತುಕೊಳ್ಳುತ್ತಾರೆ.ಈ ವೇಳೆ ಶ್ರುತಿ ಕೂಡಾ ಏನೂ ತಿಳಿಯದವಳಂತೆ ನಾಟಕ ಮಾಡುತ್ತಾರೆ. ಅನುಮಾನ ಬರಬಾರದು ಅಂತ ಆಕೆಯ ಮೊಬೈಲ್ ಅನ್ನು ಕೂಡಾ ಆ ಮೂವರು ಕಿತ್ತುಕೊಂಡು ಪರಾರಿಯಾಗುತ್ತಾರೆ.ಇದಾದ ಮೇಲೆ ಶ್ರುತಿ ಹೋಗಿದ್ದು ಮೊಬೈಲ್ ಅಷ್ಟೇ ಅಲ್ವಾ ಬಿಡು ಎಂದು ಪ್ರಿಯಕರ ವಂಶಿಕೃಷ್ಣ ರೆಡ್ಡಿಗೆ ಹೇಳುತ್ತಾಳೆ.
ಪೊಲೀಸ್ ಕಂಪ್ಲೇಂಟ್ ಕೊಡೋಣ ಎಂದರೂ ಶ್ರುತಿ ಬೇಡ ಎನ್ನುತ್ತಾಳೆ. ಆದ್ರೆ ವಂಶಿಕೃಷ್ಣರೆಡ್ಡಿ ಅದನ್ನು ಕೇಳೋದಿಲ್ಲ. ಬೆಳ್ಳಂದೂರು ಪೊಲೀಸರು ದೂರು ಕೊಡಲಾಗುತ್ತದೆ. ಪೊಲೀಸರು ಮೂವರು ಆರೋಪಿಗಳನ್ನು ಬಂಧಿಸಿ ಚೆನ್ನಾಗಿ ರುಬ್ಬುತ್ತಾರೆ. ಆಗ ಶ್ರುತಿನೇ ನಮಗೆ ರಾಬರಿ ಮಾಡಲು ಸುಪಾರಿ ಕೊಟ್ಟಿದ್ದಳು ಎಂದು ಅವರು ಬಾಯ್ಬಿಡುತ್ತಾರೆ. ಹೀಗಾಗಿ, ಪ್ರಿಯಕರನನ್ನು ದೂರ ಮಾಡಲು ಖತರ್ನಾಕ್ ಪ್ಲ್ಯಾನ್ ಮಾಡಿದ್ದ ಶ್ರುತಿ ಈಗ ಜೈಲು ಸೇರುವಂತಾಗಿದೆ.