28.7 C
Bengaluru
Tuesday, October 8, 2024

ಕೋಲಾರದ ಹೊಲದಲ್ಲಿ ಹೆಲಿಕ್ಯಾಪ್ಟರ್ ತುರ್ತು ಭೂ-ಸ್ಪರ್ಶ…

Date:

ತಾಂತ್ರಿಕ ದೋಷದಿಂದ ಕೋಲಾರದ ಹೊಲದಲ್ಲಿ ಭಾರತೀಯ ವಾಯುಸೇನಾ ಹೆಲಿಕಾಪ್ಟರ್ ತುರ್ತು ಭೂ ಸ್ಪರ್ಷ ಮಾಡಿದ ಘಟನೆ ವರದಿಯಾಗಿದೆ. ಯಲಹಂಕ ವಾಯುನೆಲೆಯಿಂದ ಚೆನ್ನೈನ ತಂಬರಂ ವಾಯುನೆಲೆಗೆ ತೆರಳುತ್ತಿದ್ದ ಭಾರತೀಯ ವಾಯುಪಡೆಗೆ ಸೇರಿದ ಚೇತಕ್ ಹೆಲಿಕಾಪ್ಟರ್ ನಲ್ಲಿ ತಾಂತ್ರಿಕ ದೋಷ ಕಂಡುಬಂದು ಕೆಜಿಎಫ್ ತಾಲೂಕಿನ ದೊಡ್ಡೂರು ಕರಪನಹಳ್ಳಿಯಲ್ಲಿ ತುರ್ತು ಭೂಸ್ಪರ್ಶ ಮಾಡಿದೆ.ವಿಮಾನದಲ್ಲಿ ಮೂವರು ಪೈಲಟ್‌ಗಳಿದ್ದರು. ಡಿಕೆ ಹಳ್ಳಿಯಲ್ಲಿ ಹೆಲಿಕಾಪ್ಟರ್ ಬಂದಿಳಿದ ಬಗ್ಗೆ ತಮ್ಮ ಹೊಲದಲ್ಲಿದ್ದ ಕೆಲಸ ಮಾಡುತ್ತಿದ್ದ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದು, ಪೊಲೀಸ್ ತಂಡವು ಕೂಡಲೇ ಸ್ಥಳಕ್ಕೆ ಧಾವಿಸಿತು.

ಹೆಲಿಕಾಪ್ಟರ್ ತಾಂತ್ರಿಕ ಸಮಸ್ಯೆಗಳಿಂದ ಕೂಡಿದ್ದರಿದ ಸಿಬ್ಬಂದಿ ತುರ್ತು ಭೂಸ್ಪರ್ಶ ಮಾಡಿದ್ದಾರೆ ಎಂದು ತಿಳಿದುಬಂದಿದೆ. ಹೆಲಿಕಾಪ್ಟರ್ ಸಹಿತ ವಿಮಾನದಲ್ಲಿದ್ದವರೆಲ್ಲರೂ ಸುರಕ್ಷಿತವಾಗಿದ್ದಾರೆ ಎಂದು ಕೆಜಿಎಫ್ ಪೊಲೀಸ್ ವರಿಷ್ಠಾಧಿಕಾರಿ ಕೆ.ಎಂ.ಶಾಂತರಾಜು ತಿಳಿಸಿದ್ದಾರೆ.ಬೆಂಗಳೂರುನಲ್ಲಿರುವ ಐಎಎಫ್‌ನ ಹಿರಿಯ ಅಧಿಕಾರಿಗಳೊಂದಿಗೆ ಮಾತನಾಡಿದ್ದೇನೆ.

ಪ್ರೋಟೋಕಾಲ್‌ಗೆ ಬದ್ಧವಾಗಿ, ಎಲ್ಲಾ ಮೂವರು ಪೈಲಟ್‌ಗಳಿಗೆ ಬಿಇಎಂಎಲ್ ಅತಿಥಿಗೃಹದಲ್ಲಿ ವಸತಿ ಕಲ್ಪಿಸಲಾಗಿದ್ದು, ಹೆಲಿಕಾಪ್ಟರ್ ಸುತ್ತಲೂ ಭದ್ರತಾ ಪರಿಧಿಯನ್ನು ಸ್ಥಾಪಿಸಲು ಹೆಚ್ಚುವರಿ ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ ಎಂದು ಶಾಂತರಾಜು ತಿಳಿಸಿದ್ದಾರೆ. ಚೇತಕ್‌ನ ನಿರ್ವಹಣಾ ಕಾರ್ಯವನ್ನು ಕೈಗೊಳ್ಳಲು ತಂತ್ರಜ್ಞರ ತಂಡವು ಮತ್ತೊಂದು ಹೆಲಿಕಾಪ್ಟರ್‌ನಲ್ಲಿ ಸ್ಥಳಕ್ಕೆ ತಲುಪಿದೆ ಎಂದು ಅವರು ಹೇಳಿದರು.

Latest Stories

LEAVE A REPLY

Please enter your comment!
Please enter your name here