ಪುರುಷನ ಜೊತೆ ಲಾಡ್ಜ್‌ಗೆ ಬಂದಿದ್ದ ಮಹಿಳೆ ಅನುಮಾನಾಸ್ಪದವಾಗಿ ಸಾವನ್ನಪ್ಪಿದ್ದಾಳೆ. ಚಿಕ್ಕಬಳ್ಳಾಪುರ ನಗರದ ಎಂಜಿ ರಸ್ತೆಯಲ್ಲಿರುವ ಕಾವೇರಿ ಲಾಡ್ಜ್‌ನಲ್ಲಿ ಈ ಘಟನೆ ನಡೆದಿದೆ. ರಾತ್ರಿ ಜೋಡಿಯೊಂದು ಲಾಡ್ಜ್‌ನಲ್ಲಿ ರೂಮ್ ಬುಕ್ ಮಾಡಿದ್ದಾರೆ. ರಾತ್ರಿಯಿಡೀ ಅಲ್ಲೇ ಇದ್ದಾರೆ. ಆದ್ರೆ ಬೆಳಗ್ಗೆ ಪುರುಷ ಹೊರಹೋಗಿದ್ದಾನೆ.ಮಹಿಳೆ ಮಾತ್ರ ಹೊರಬಂದಿಲ್ಲ.ಅನುಮಾನ ಬಂದು ನೋಡಿದರೆ ಮಹಿಳೆ ಶವವಾಗಿ ಮಲಗಿದ್ದಳು ಎಂದು ಲಾಡ್ಜ್ ಸಿಬ್ಬಂದಿ ಹೇಳಿದ್ದಾರೆ.
ಮಹಿಳೆ ಹಾಗೂ ಮಹಿಳೆ ಜೊತೆ ಬಂದ ಪುರುಷ ಯಾರು ಅನ್ನೋದು ಗೊತ್ತಾಗಿಲ್ಲ. ಲಾಡ್ಜ್‌ನಲ್ಲಿ ರೂಮ್ ಪಡೆಯುವಾಗ ಯಾವುದೇ ದಾಖಲೆ, ಅಡ್ರೆಸ್ ನೀಡಿಲ್ಲ. ಆದರೂ ಲಾಡ್ಜ್‌ನವರು ರೂಮ್ ನೀಡಿದ್ದಾರೆ. ಇದು ಹಲವು ಅನುಮಾನಗಳಿಗೆ ಕಾರಣವಾಗಿದೆ. ಮೂಲಗಳ ಪ್ರಕಾರ ಪುರುಷ ವ್ಯಕ್ತಿ ಚಿಕ್ಕಬಳ್ಳಾಪುರ ಬಳಿಯ ಗ್ರಾಮವೊಂದರ ನರಸಂಇಹಮೂರ್ತಿ ಎಂದು ಹೇಳಲಾಗುತ್ತಿದೆ.
ಇದು ಕೊಲೆಯೋ ಅಥವಾ ಇಬ್ಬರೂ ಪ್ರಣಯದಲ್ಲಿದ್ದಾಗ ಹೃದಯಾಘಾತವಾಗಿದೆಯೋ ಗೊತ್ತಾಗಿಲ್ಲ. ಹೀಗಾಗಿ ಪೊಲೀಸರು ಅನುಮಾನಾಸ್ಪದ ಸಾವು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಮಹಿಳೆಯ ಜೊತೆ ಬಂದಿದ್ದ ವ್ಯಕ್ತಿಯ ಚಹರೆ ಲಾಡ್ಜ್‌ನಲ್ಲಿದ್ದ ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಆದ್ರೆ ಅದ್ರಲ್ಲಿ ಸ್ಪಷ್ಟತೆ ಇಲ್ಲ. ಹೀಗಾಗಿ ಆಧುನಿಕ ತಂತ್ರಜ್ಞಾನ ಬಳಸಿ ಆರೋಪಿಯ ಪತ್ತೆ ಕಾರ್ಯ ನಡೆಯುತ್ತಿದೆ.ಇನ್ನು ಯಾವುದೇ ದಾಖಲೆ ಪಡೆಯದೇ ಅದು ಹೇಗೆ ರೂಮ್ ಕೊಟ್ಟಿರಿ ಎಂದು ಲಾಡ್ಜ್ ಮಾಲೀಕರನ್ನು ಪೊಲೀಸರು ವಿಚಾರಣೆ ನಡೆಸಿದ್ದಾರೆ.