28.7 C
Bengaluru
Tuesday, October 8, 2024

ಐ-ಫೋನ್ ಗಾಗಿ ಡೆಲಿವರಿ ಬಾಯ್ ಹತ್ಯೆ..

Date:

ಕ್ಯಾಶ್ ಆನ್ ಡೆಲಿವರಿ ಮೂಲಕ ವ್ಯಕ್ತಿಯೋರ್ವ ಐ-ಫೋನ್ ಆರ್ಡರ್ ಮಾಡಿದ್ದು, ಹಣ ಕೊಡದೇ ಡೆಲಿವರಿ ಬಾಯ್ ನ್ನು ಹತ್ಯೆ ಮಾಡಿರುವ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ.30 ವರ್ಷದ ಡೆಲಿವರಿ ಬಾಯ್ ಹತ್ಯೆಗೀಡಾಗಿದ್ದು, ಆತನಿಗೆ ಆರ್ಡರ್ ಮಾಡಿದ್ದ ವ್ಯಕ್ತಿ 1.5 ಲಕ್ಷ ರೂಪಾಯಿ ಬಿಲ್ ಪಾವತಿ ಮಾಡಬೇಕಿತ್ತು ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.ಡೆಲಿವರಿ ಬಾಯ್ ದೇಹವನ್ನು ಲಕ್ನೋದ ಇಂದಿರಾ ಕಾಲುವೆಗೆ ಎಸೆಯಲಾಗಿದೆ ಮತ್ತು ಅದನ್ನು ಹುಡುಕಲು ರಾಜ್ಯ ವಿಪತ್ತು ನಿರ್ವಹಣಾ ಪಡೆ (ಎಸ್‌ಡಿಆರ್‌ಎಫ್) ತಂಡವನ್ನು ಕರೆಯಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಚಿನ್ಹಾಟ್‌ನ ಗಜಾನನ್ ಎಂಬಾತ ಫ್ಲಿಪ್‌ಕಾರ್ಟ್‌ನಿಂದ ಸುಮಾರು 1.5 ಲಕ್ಷ ಮೌಲ್ಯದ ಐಫೋನ್ ಅನ್ನು ಆರ್ಡರ್ ಮಾಡಿದ್ದರು ಮತ್ತು COD (ಕ್ಯಾಶ್ ಆನ್ ಡೆಲಿವರಿ) ಪಾವತಿ ಆಯ್ಕೆಯನ್ನು ಆರಿಸಿಕೊಂಡಿದ್ದರು ಎಂದು ಉಪ ಪೊಲೀಸ್ ಆಯುಕ್ತ ಶಶಾಂಕ್ ಸಿಂಗ್ ಹೇಳಿದ್ದಾರೆ.“ಸೆಪ್ಟೆಂಬರ್ 23 ರಂದು, ಡೆಲಿವರಿ ಬಾಯ್, ನಿಶಾತ್‌ಗಂಜ್‌ನ ಭರತ್ ಸಾಹು ಎಂಬಾತ ಫೋನ್ ತಲುಪಿಸಲು ಹೋಗಿದ್ದನು. ಫೋನ್ ತಂದ ಆತನನ್ನು ಕತ್ತು ಹಿಸುಕಿ ಕೊಲೆ ಮಾಡಿದ ನಂತರ, ಅವರು ಅವನ ಶವವನ್ನು ಗೋಣಿಚೀಲದಲ್ಲಿ ಹಾಕಿ ಇಂದಿರಾ ಕಾಲುವೆಯಲ್ಲಿ ವಿಲೇವಾರಿ ಮಾಡಿದ್ದಾರೆ” ಎಂದು ಅಧಿಕಾರಿ ತಿಳಿಸಿದ್ದಾರೆ.

ಎರಡು ದಿನವಾದರೂ ಸಾಹು ಮನೆಗೆ ಬಾರದೇ ಇದ್ದಾಗ, ಆತನ ಕುಟುಂಬದವರು ಸೆಪ್ಟೆಂಬರ್ 25 ರಂದು ಚಿನ್‌ಹತ್ ಪೊಲೀಸ್ ಠಾಣೆಯಲ್ಲಿ ನಾಪತ್ತೆ ದೂರು ದಾಖಲಿಸಿದ್ದರು.ಸಾಹು ಅವರ ಕರೆ ವಿವರಗಳನ್ನು ಸ್ಕ್ಯಾನ್ ಮಾಡುವಾಗ ಮತ್ತು ಅವನ ಸ್ಥಳವನ್ನು ಪತ್ತೆಹಚ್ಚಲು ಪ್ರಯತ್ನಿಸುತ್ತಿರುವಾಗ, ಪೊಲೀಸರು ಗಜಾನನನ ಸಂಖ್ಯೆಯನ್ನು ಪತ್ತೆ ಹಚ್ಚಿದ್ದಾರೆ. ಪೊಲೀಸರು ಆತನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ವಿಷಯ ಬಯಲಾಗಿದೆ.

Latest Stories

LEAVE A REPLY

Please enter your comment!
Please enter your name here