28.7 C
Bengaluru
Tuesday, October 8, 2024

*ಇದು ಕಾಫಿ ಶಾಪ್ ಅಲ್ಲ* ಸುಪ್ರೀಂ ಕೋರ್ಟ್ ನ್ಯಾಯ ಮೂರ್ತಿ….

Date:

ಭಾರತದ ಮುಖ್ಯ ನ್ಯಾಯಮೂರ್ತಿ ಡಿವೈ ಚಂದ್ರಚೂಡ್ ಅವರು ಪೀಠವನ್ನು ಉದ್ದೇಶಿಸಿ ಮಾತನಾಡಲು “ಯಾ, Ya” ಎಂಬ ಅನೌಪಚಾರಿಕ ಪದವನ್ನು ಬಳಸಿದ್ದಕ್ಕಾಗಿ ದಾವೆದಾರರನ್ನು ತರಾಟೆ ತೆಗೆದುಕೊಂಡ ಘಟನೆ ನಡೆದಿದೆ.ಸುಪ್ರೀಂಕೋರ್ಟ್‌ ನಿವೃತ್ತ ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೊಯ್ ಅವರನ್ನು ಪಿಐಎಲ್‌ನಲ್ಲಿ ಕಕ್ಷಿದಾರರನ್ನಾಗಿ ಸೇರಿಸಿಕೊಂಡಿರುವ ಬಗ್ಗೆ ಸುಪ್ರೀಂ ಕೋರ್ಟ್ ಗಂಭೀರ ಕಳವಳ ವ್ಯಕ್ತಪಡಿಸಿತು.

ಸೇವಾ ವಿವಾದಕ್ಕೆ ಸಂಬಂಧಿಸಿದ ಮನವಿಯನ್ನು ಈ ಹಿಂದೆ ವಜಾಗೊಳಿಸಿದ ಬಗ್ಗೆ ಆಂತರಿಕ ವಿಚಾರಣೆಗೆ ಅರ್ಜಿದಾರರು ಕೋರಿದ್ದರು.ನ್ಯಾಯಾಧೀಶರನ್ನು ಪ್ರತಿವಾದಿಯಾಗಿ ನೀವು ಹೇಗೆ ಪಿಐಎಲ್ ಸಲ್ಲಿಸಬಹುದು? ಸ್ವಲ್ಪ ಘನತೆ ಇರಬೇಕು. ನ್ಯಾಯಾಧೀಶರ ವಿರುದ್ಧ ಆಂತರಿಕ ವಿಚಾರಣೆ ಬೇಕು ಎಂದು ನೀವು ಹೇಳಲು ಸಾಧ್ಯವಿಲ್ಲ.

ನ್ಯಾಯಮೂರ್ತಿ ರಂಜನ್ ಗೊಗೊಯ್ ಅವರು ಸುಪ್ರೀಂ ಕೋರ್ಟ್‌ನ ನಿವೃತ್ತ ನ್ಯಾಯಾಧೀಶರಾಗಿದ್ದರು,” ಎಂದು ಮುಖ್ಯ ನ್ಯಾಯಮೂರ್ತಿ ಡಿ ವೈ ಚಂದ್ರಚೂಡ್ ಅವರನ್ನೊಳಗೊಂಡ ಪೀಠವು ಪುಣೆ ಮೂಲದ ಅರ್ಜಿದಾರರಿಗೆ ತಿಳಿಸಿದೆ.“ಅವರು ಭಾರತದ ಮುಖ್ಯ ನ್ಯಾಯಮೂರ್ತಿಯಾಗಿ ನಿವೃತ್ತರಾದರು. ನೀವು ಪೀಠದ ಮುಂದೆ ಯಶಸ್ವಿಯಾಗದ ಕಾರಣ ನ್ಯಾಯಾಧೀಶರ ವಿರುದ್ಧ ಆಂತರಿಕ ವಿಚಾರಣೆ ಬೇಕು ಎಂದು ಹೇಳಲು ಸಾಧ್ಯವಿಲ್ಲ. ಕ್ಷಮಿಸಿ, ನಾವು ಇದನ್ನು ಸಹಿಸುವುದಿಲ್ಲ” ಎಂದು ಪೀಠ ಹೇಳಿತು.

ಅರ್ಜಿ ವಿಚಾರಣೆ ಆರಂಭದಲ್ಲಿ ನ್ಯಾಯಮೂರ್ತಿಯವರು ನ್ಯಾಯಾಂಗದ ಅಭಿವೃದ್ಧಿಗೆ ಸಂಬಂಧಿಸಿದಂತೆ ಪ್ರಶ್ನೆಗಳನ್ನು ಕೇಳಿದಾಗ ದಾವೆದಾರ, “ಹೌದು” ಬದಲು “ಯಾ-ಯಾ” ಎಂಬ ಉತ್ತರ ನೀಡಿದಾಗ ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿ ಮುಖ್ಯ ನ್ಯಾಯಮೂರ್ತಿ, “ಇದೇನು ‘ಯಾ-ಯಾ’. ಇದು ಕಾಫಿ ಅಂಗಡಿಯಲ್ಲ. ನನಗೆ ಈ ‘ಯಾ ಯಾ’ ಗೆ ಬಹಳ ಅಲರ್ಜಿಯಿದೆ. ಇದನ್ನು ಅನುಮತಿಸಲಾಗುವುದಿಲ್ಲ.” ಎಂದು ತೀಕ್ಷ್ಮವಾಗಿ ಪ್ರತಿಕ್ರಿಯಿಸಿದರು.

“ನೀವು ಅರ್ಜಿ ಮತ್ತು ಪರಿಶೀಲನೆಯ ಅರ್ಜಿಯ ಕಾಲಾವಧಿಯ ಬಳಿಕ ಸೇವಾ ವಿಷಯದಲ್ಲಿ PIL ಅನ್ನು ಹೇಗೆ ದಾಖಲಿಸುತ್ತೀರಿ, ನೀವು ಕ್ಯೂರೇಟಿವ್‌ ಅರ್ಜಿಯನ್ನು ಸಲ್ಲಿಸಬೇಕಾಗಿತ್ತು,” ಎಂದು CJI ಹೇಳಿದರು.“ಎಂಎ (ವಿವಿಧ ಅರ್ಜಿ) ಸಲ್ಲಿಸುವಿಕೆಯ ವಿರುದ್ಧದ ಮೇಲ್ಮನವಿಯಲ್ಲಿ ನೀವು ನ್ಯಾಯಮೂರ್ತಿ ಗೊಗೋಯ್ ಅವರ ಹೆಸರನ್ನು ಅಳಿಸುತ್ತೀರಾ? ನೀವು ಇದನ್ನು ಲಿಖಿತವಾಗಿ ನೀಡುತ್ತೀರಾ … ನೀವು ಮೊದಲು ಅಳಿಸಿ ಮತ್ತು ನಂತರ ನಾವು ನೋಡುತ್ತೇವೆ” ಎಂದು ಸಿಜೆಐ ಹೇಳಿದರು ಎಂಬುದಾಗಿ ಪಿಟಿಐ ವರದಿ ಮಾಡಿದೆ.

Latest Stories

LEAVE A REPLY

Please enter your comment!
Please enter your name here