21.1 C
Bengaluru
Thursday, June 19, 2025

ಮಗನ ಸುರಕ್ಷತೆ ಮುಖ್ಯ ತಾನೇ ಕೊಡಿಸಿದ ಬೈಕ್ ಗೆ ಬೆಂಕಿ ಇಟ್ಟ ತಂದೆ…

Date:

ತಂದೆಯೇ ಖುಷಿಯಿಂದ ಮಗನಿಗೆ ಬೈಕ್ ಕೊಡಿಸಿದ್ದರು, ಆದರೆ ಆ ಬೈಕ್ ಮಗನಿಗೆ ಆಪತ್ತಾಗಬಹುದು ಎಂದು ತಿಳಿದ ಅವರು ಹೆಚ್ಚು ಯೋಚಿಸದೆ ಅದಕ್ಕೆ ಬೆಂಕಿ ಹಚ್ಚಿದ್ದಾರೆ ಅಷ್ಟೇ ಅಲ್ಲದೆ ಮಗನೇ ನೀನು ಅಪಘಾತದಲ್ಲಿ ಸಾಯುವುದು ನನಗೆ ಇಷ್ಟವಿಲ್ಲ ಎಂದು ಹೇಳಿದ್ದಾರೆ. ಮಲೇಷ್ಯಾದಲ್ಲಿ ಈ ಘಟನೆ ನಡೆದಿದೆ.ಕೌಲಾಲಂಪುರದಿಂದ ಸ್ವಲ್ಪ ದೂರದ ಸ್ಥಳದಲ್ಲಿ ಈ ಘಟನೆ ನಡೆದಿದ್ದು ತಂದೆ ತನ್ನ ಮಗನ ಬೈಕ್ ಅನ್ನು ಸುಟ್ಟು ಹಾಕಿದ್ದಾರೆ.

ಈ ಘಟನೆಯ ವಿಡಿಯೋವನ್ನು ಸ್ವತಃ ತಂದೆಯೇ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದು, ಅದರಲ್ಲಿ ಬೈಕ್ ಸುಟ್ಟು ಹಾಕಿರುವುದು ಕಂಡು ಬಂದಿದೆ.ಮಗನೂ ಹಲವು ಮೋಟಾರ್ ಬೈಕ್ ರೇಸ್ ಗಳಲ್ಲಿ ಪಾಲ್ಗೊಂಡು ಸಂಜೆ ತುಂಬಾ ತಡವಾಗಿ ಮನೆಗೆ ಮರಳುತ್ತಿದ್ದ.

ಈ ಕಾರಣದಿಂದಾಗಿ, ಅವನ ತಂದೆ ಯಾವಾಗಲೂ ತನ್ನ ಮಗನ ಸುರಕ್ಷತೆಯ ಬಗ್ಗೆ ಹೆದರುತ್ತಿದ್ದರು.ತಂದೆ ತನ್ನ ಮಗನನ್ನು ಹಲವಾರು ಬಾರಿ ಮನವೊಲಿಸಲು ಪ್ರಯತ್ನಿಸಿದ್ದರು, ಆದರೆ ಅವನು ಪ್ರತಿ ಬಾರಿಯೂ ಅವನನ್ನು ನಿರ್ಲಕ್ಷಿಸುತ್ತಿದ್ದ, ಹೀಗಿರುವಾಗ ಮಗ ಅಪಘಾತದಲ್ಲಿ ಸಾಯುವ ಮುನ್ನವೇ ಬೈಕ್ ಧ್ವಂಸ ಮಾಡಬೇಕು ಎಂದು ನಿರ್ಧರಿಸಿದ್ದರು ಎನ್ನಲಾಗಿದೆ.

Latest Stories

LEAVE A REPLY

Please enter your comment!
Please enter your name here