20.3 C
Bengaluru
Saturday, February 8, 2025

ನಶೆಗೆ ಬಲಿಯಾದ ಪತ್ನಿ…

Date:

ಕುಡಿದ ಮತ್ತಿನಲ್ಲಿ ಪತ್ನಿಯ ತಲೆಯನ್ನು ಜಜ್ಜಿ ಭೀಕರವಾಗಿ ಕೊಂದಿರುವ ಘಟನೆ ಕಲಬುರಗಿ ನಗರ ಹೊರವಲಯದ ಶಹಬಾದ್ ರಸ್ತೆಯ ಇಟ್ಟಿಗೆ ಭಟ್ಟಿಯಲ್ಲಿ ನಡೆದಿದೆ.ಕೊಲೆಯಾದ ಮಹಿಳೆಯನ್ನು ಪ್ರಿಯಾಂಕಾ (35) ಎಂದು ಹೇಳಲಾಗುತ್ತಿದ್ದು, ಪತಿಯನ್ನು ವಕೀಲ್ ರಾಠೋಡ್ ಎಂದು ತಿಳಿದುಬಂದಿದೆ.ಆಳಂದ ತಾಲೂಕಿನ ಕೊಡಲಹಂಗರಗಾ ಗ್ರಾಮದ ಪ್ರಿಯಾಂಕಾಳನ್ನ ಅದೇ ತಾಲೂಕಿನ ನಿಂಬರ್ಗಾ ಗ್ರಾಮದ ವಕೀಲ್ ರಾಠೋಡ್ ಜೊತೆ ಮದ್ವೆ ಮಾಡಿಕೊಡಲಾಗಿತ್ತು.

ಇವರು ಮಕ್ಕಳೊಂದಿಗೆ ಶಹಬಾದ್ ರಸ್ತೆಯಲ್ಲಿನ ಇಟ್ಟಿಗೆ ಭಟ್ಟಿ ಬಳಿ ಪುಟ್ಟದೊಂದು ಮನೆ ಮಾಡಿಕೊಂಡಿದ್ದರು. ಹಿಗೇ ಅದೇ ಇಟ್ಟಿಗೆ ಭಟ್ಟಿಯಲ್ಲಿ ಒಟ್ಟೊಟ್ಟಿಗೆ ಕೆಲಸ ಮಾಡ್ತಿದ್ದ ದಂಪತಿ ನಿತ್ಯವೂ ಕಂಠಪೂರ್ತಿ ಕುಡಿಯುತ್ತಿದ್ದರು.ಪತಿ ವಕೀಲ್ ರಾಠೋಡ್ ಮತ್ತು ಪತ್ನಿ ಪ್ರಿಯಾಂಕಾ ಇಟ್ಟಿಗೆ ಭಟ್ಟಿಯಲ್ಲಿ ಕೆಲಸ ಮಾಡುತ್ತಾ, ಸಂಜೆಯಾದರೆ ಸಾಕು ರಾಠೋಡ್ ಮನೆಗೆ ಎಣ್ಣೆ ತರುತ್ತಿದ್ದನು. ಬಳಿಕ ಇಬ್ಬರೂ ಒಟ್ಟೊಟ್ಟಿಗೆ ಎಣ್ಣೆ ಹೊಡೆದು ಇಬ್ಬರು ಮಕ್ಕಳನ್ನ ನಿರ್ಲಕ್ಷ್ಯ ಮಾಡುತ್ತಿದ್ದರಿಂದ, ಕೆಲ ದಿನಗಳ ಹಿಂದೆ ಮಕ್ಕಳನ್ನ ಅಜ್ಜ ಅಜ್ಜಿ ಬಳಿ ಬಿಟ್ಟು ಬಂದಿದ್ದರು.

ಇಷ್ಟಾದರೂ ಸಹ ಇಬ್ಬರ ಎಣ್ಣೆ ದಾಹ ಮಾತ್ರ ತೀರುತ್ತಿರಲಿಲ್ಲ.ಅದರಂತೆ ಕಳೆದ ರಾತ್ರಿ ಎಣ್ಣೆ ಪಾರ್ಟಿ ಶುರುವಾದಾಗ, ಎಣ್ಣೆ ಕಡಿದು ಬಿದ್ದಿರೋ ವಿಚಾರಕ್ಕೆ ಇಬ್ಬರ ಮಧ್ಯ ಗಲಾಟೆ ಆಗಿದೆ. ಜಗಳದ ನಡುವೆ ಪತಿ ವಕೀಲ್ ರಾಠೋಡ್, ನಶೆಯಲ್ಲಿ ಪತ್ನಿಗೆ ಇಟ್ಟಿಗೆಯಿಂದ ಮನಬಂದಂತೆ ಥಳಿಸಿ ಕೊಲೆ ಮಾಡಿದ್ದಾನೆ. ಘಟನೆಗೆ ಸಂಬಂಧಿಸಿದಂತೆ ಆರೋಪಿ ಪತಿಯನ್ನ ವಿಶ್ವವಿದ್ಯಾಲಯ ಠಾಣೆ ಪೊಲೀಸರು ಬಂಧಿಸಿದ್ದು, ತನಿಖೆ ನಡೆಸುತ್ತಿದ್ದಾರೆ.

Latest Stories

LEAVE A REPLY

Please enter your comment!
Please enter your name here