ಹಾಸನ : ಹಾಸನದ ಎನ್. ಆರ್ ವೃತ್ತದಲ್ಲಿ ವಾಹನವಿಲ್ಲದೆ ಹೆರಿಗೆ ನೋವು ತಾಳಲಾರದೆ ನರಳುತ್ತಿದ್ದ ಗರ್ಭಿಣಿ ಮಹಿಳೆ ಆ ವೇಳೆ ಪೊಲೀಸ್ ಗಸ್ತು ತಿರುಗುತ್ತಿದ್ದ ಹಾಸನ ಸಿಟಿ ಪೊಲೀಸ್ ಠಾಣೆಯ ಸಬ್ ಇನ್ಸ್ಪೆಕ್ಟರ್ ಆನಂದ್ ಹಾಗೂ ಮತ್ತೊಬ್ಬ ಪೊಲೀಸ್ ಸಿಬ್ಬಂದಿ ಮದು ಮಹಿಳೆಯ ಸಹಾಯಕ್ಕೆ ಬರುತ್ತಾರೆ.ಮಧ್ಯರಾತ್ರಿ ಹೆರಿಗೆ ನೋವು ಎಂದು ಹಾಸನದ ಎನ್. ಆರ್ ಸರ್ಕಲ್ ನಲ್ಲಿ ನೋವಿನಿಂದ ಬೇರೆಯೊಂದು ಗ್ರಾಮಕ್ಕೆ ಹೋಗಲು ವಾಹನಕ್ಕೆ ಕಾಯುತ್ತಿರುತ್ತಾರೆ.ಹಾಸನ ಸಿಟಿ ಪೊಲೀಸ್ ಇದನ್ನು ಗಮನಿಸಿ ತಕ್ಷಣವೇ ಪೊಲೀಸ್ ವಾಹನದಲ್ಲಿ ಕರೆದುಕೊಂಡು ಹೋಗಿ ಹಾಸನದ ಜಿಲ್ಲಾ ಆಸ್ಪತ್ರೆಗೆ ಸೇರಿಸುತ್ತಾರೆ.
ಮಹಿಳೆ ಹಾಗೂ ಮಗುವಿಗೆ ಸರಿಯಾದ ಸಮಯದಲ್ಲಿ ಪೊಲೀಸ್ ಸಹಾಯದಿಂದ ಆಸ್ಪತ್ರೆಗೆ ಸೇರಿಸಿದ್ದು ಚಿಕಿತ್ಸೆಗೆ ನೆರವಾಯಿತು ಇದರಿಂದ ತಾಯಿ ಮಗುವಿನ ಪ್ರಾಣ ಉಳಿಯಿತು ಎಂದು ಆಸ್ಪತ್ರೆ ಸಿಬ್ಬಂದಿ ತಿಳಿಸಿರುತ್ತಾರೆ.ಸಬ್ ಇನ್ಸ್ಪೆಕ್ಟರ್ ಆನಂದ್ ಹಾಗೂ ಪೊಲೀಸ್ ಸಿಬ್ಬಂದಿ ಮದು ಅವರಿಗೆ ಮಹಿಳೆ ಮತ್ತು ಅವರ ಕುಟುಂಬ ಕೃತಜ್ಞತೆ ತಿಳಿಸಿದ್ದಾರೆ .ಸಬ್ ಇನ್ಸ್ಪೆಕ್ಟರ್ ಆನಂದ್ ಹಾಗೂ ಪೊಲೀಸ್ ಸಿಬ್ಬಂದಿ ಮದು ಅವರ ಸೇವೆಗೆ ಮಾಡಿರುವ ಕೆಲಸಕ್ಕೆ ಹಾಸನದ ಜನತೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಪೊಲೀಸ್ ಸಾರ್ವಜನಿಕರಿಗೆ ಸಹಾಯ ಮಾಡುತ್ತಾರೆ ಎಂಬುದು ಇತ್ತೀಚಿಗೆ ನಡೆಯುತ್ತಿರುವ ಘಟನೆ ಸಾಕ್ಷಿ… ಪೊಲೀಸ್ ಇಲಾಖೆಯ ಸಿಬ್ಬಂದಿಗಳು ನಮ್ಮ ಸೇವೆಗೆ, ಜೀವನ ಕಾಪಾಡೋಕೆ ಸದಾ ನಮಗಾಗಿ ಇರುತ್ತಾರೆ ಅದೇ ಸತ್ಯ..ಮಕ್ಕಳ ಪ್ರಾಣ ಉಳಿಸಿದ್ದಾರೆ, ಭಯವಿಲ್ಲದೇ ನಾವು ಬದಕಲು ನಾವಿದ್ದೇವೆ ಎಂದು ನೆನಪಿಸುತ್ತಾರೆ ಪೊಲೀಸ್..
ವರದಿ : ಆಂಟೋನಿ ಬೇಗೂರು