ಟೀಂ ಇಂಡಿಯಾ ಮಾಜಿ ಆಟಗಾರ ಸಲೀಲ್ ಅಂಕೋಲಾ ಅವರ ತಾಯಿ ಅನುಮಾನಾಸ್ಪದ ರೀತಿಯಲ್ಲಿ ಸಾವನ್ನಪ್ಪಿದ್ದಾರೆ.ಮಹಾರಾಷ್ಟ್ರದ ಪುಣೆಯ ಫ್ಲ್ಯಾಟ್‌ನಲ್ಲಿ ರಕ್ತದಮಡುವಿನಲ್ಲಿ ಅವರು ಪತ್ತೆಯಾಗಿದ್ದಾರೆ. ಅವರ ಕತ್ತನ್ನು ಹರಿತವಾದ ಆಯುಧದಿಂದ ಸೀಳಲಾಗಿದೆ. ಹೀಗಾಗಿ ಇದು ಕೊಲೆಯೋ, ಆತ್ಮಹತ್ಯೆಯೋ ಎಂಬುದರ ಬಗ್ಗೆ ಅನುಮಾನ ಮೂಡಿದೆ.ಸಲೀಲ್ ಅಂಕೋಲಾ ಅವರ ತಾಯಿ ಮಾಲಾ ಅಶೋಕ್ ಅಂಕೋಲಾ ಮೃತಪಟ್ಟವರಾಗಿದ್ದಾರೆ.
ಇವರು ಕರ್ನಾಟಕದ ಉತ್ತರ ಕನ್ನಡ ಜಿಲ್ಲೆಯ ಅಂಕೋಲಾದವರಾಗಿದ್ದು, ಮಹಾರಾಷ್ಟ್ರದಲ್ಲಿ ದಶಕಗಳ ಹಿಂದೆಯೇ ನೆಲೆಸಿದ್ದಾರೆ. ಸಲೀಲ್ ಅಂಕೋಲಾ ಅವರು ಮುಂಬೈ ಕ್ರಿಕೆಟ್ ತಂಡದ ಪರವಾಗಿ ಆಡಿದ್ದರು. ನಂತರ ಟೀಂ ಇಂಡಿಯಾಕ್ಕೂ ಆಯ್ಕೆ ಹಲವು ಪಂದ್ಯಗಳನ್ನು ಆಡಿದ್ದರು.1996ರ ಏಕದಿನ ವಿಶ್ವಕಪ್ ತಂಡಕ್ಕೂ ಸಲೀಲ್ ಅಂಕೋಲಾ ಆಯ್ಕೆಯಾಗಿದ್ದರು.ಪುಣೆಯ ಡೆಕ್ಕನ್ ಜಿಮ್ಖಾನಾ ಪ್ರದೇಶದಲ್ಲಿರುವ ಪ್ರಭಾತ್ ರೋಡ್ ಕಾಂಪ್ಲೆಕ್ಸ್‌ನಲ್ಲಿ ಇವರು ವಾಸ ಮಾಡುತ್ತಿದ್ದರು.
ಬಹಳ ಸಮಯದಿಂದ ಫ್ಲ್ಯಾಟ್ ಬಾಗಿಲು ತೆಗೆಯದೇ ಇದ್ದಿದ್ದರಿಂದ ಅಕ್ಕಪಕ್ಕದವರು ಪರಿಶೀಲನೆ ಮಾಡಿದಾಗ ಮಾಲಾ ಅಶೋಕ್ ಅಂಕೋಲಾ ರಕ್ತದಮಡುವಿನಲ್ಲಿ ಬಿದ್ದಿದ್ದು ಕಂಡುಬಂತು. ತಕ್ಷಣ ಆಕೆಯನ್ನು ಆಸ್ಪತ್ರೆಗೆ ಕರೆದುಕೊಂಡು ಹೋದರಾದರೂ ಯಾವುದೇ ಪ್ರಯೋಜನವಾಗಲಿಲ್ಲ.ಮಾಲಾ ಅವರ ಕುತ್ತಿಗೆ ಸೀಳಿದ ಸ್ಥಿತಿಯಲ್ಲಿದೆ. ಜೊತೆಗೆ ಮನೆಗೆ ಯಾರೂ ಬಂದಿರುವ ಕುರುಹುಗಳೂ ಕೂಡಾ ಇಲ್ಲ. ಹೀಗಾಗಿ ಇದು ಆತ್ಮಹತ್ಯೆಯೋ ಕೊಲೆಯೋ ಗೊತ್ತಾಗುತ್ತಿಲ್ಲ. ಪೊಲೀಸರು ಈ ಬಗ್ಗೆ ತೀವ್ರ ತನಿಖೆ ನಡೆಸುತ್ತಿದ್ದಾರೆ.