25.5 C
Bengaluru
Monday, September 1, 2025

ಮಾದಕ ವಸ್ತುಗಳು ವಿದೇಶಿ ಪೋಸ್ಟ್ ಆಫೀಸ್ಗೆ …

Date:

ಮಾದಕ ವಸ್ತುಗಳ ನಿಯಂತ್ರಣಕ್ಕಾಗಿ ಪೊಲೀಸರು ಹಲವಾರು ಕಠಿಣ ಕ್ರಮ ಕೈಗೊಂಡರು ಸಹ ಚಾಲಾಕಿ ಖದೀಮರು ಯಾವುದೊ ಒಂದು ಮಾರ್ಗ ಬಳಸಿ ಇದನ್ನ ಮಾರಾಟ ಮಾಡಿತ್ತಿದ್ದಾರೆ. ಇದೀಗ ಬೆಂಗಳೂರಿನಲ್ಲಿ ವಿದೇಶಿ ಪೋಸ್ಟ್ ಆಫೀಸ್ ಗಳಿಗೆ ವಿದೇಶದಿಂದಲೇ ಮಾದಕ ವಸ್ತುಗಳ ಪಾರ್ಸೆಲ್ ಬರುತ್ತೀವೆ. ಅಪರಿಚಿತ ವ್ಯಕ್ತಿಗಳ ವಿಳಾಸಕ್ಕೆ ವಿದೇಶಗಳಿಂದ ಮಾದಕ ವಸ್ತುಗಳು ಬರುತ್ತಿದೆ. ಕಳೆದ ಅಕ್ಟೋಬರ್ 1 ರಂದು ಸಿಸಿಬಿ ಅಧಿಕಾರಿಗಳಿಗೆ ಈ ಬಗ್ಗೆ ಫಾರಿನ್ ಪೋಸ್ಟ್ ಆಫೀಸ್ ನಿಂದ ಮಾಹಿತಿ ಬಂದಿತ್ತು.

ಈ ಮಾಹಿತಿ ಮೇರೆಗೆ ಶ್ವಾನ ದಳದ ಸಮೇತ ಸಿಸಿಬಿ ನಾರ್ಕೋಟಿಕ್ ವಿಂಗ್ ದಾಳಿ ನಡೆಸಿದ್ದು ಈ ವೇಳೆ ಪಾರ್ಸೆಲ್ ಗಳನ್ನ ಕಂಡು ಶ್ವಾನದಳ ಅನುಮಾನಾಸ್ಪದವಾಗಿ ವರ್ತಿಸಿದೆ. ಕೂಡಲೇ ಆ ಪಾರ್ಸೆಲ್ ವಶಕ್ಕೆ ಪಡೆದು ಟೆಸ್ಟ್ಗೆ ಕಳುಹಿಸಿದಾಗ ಅದರಲ್ಲಿ ಮಾದಕವಸ್ತುಗಳು ಪತ್ತೆಯಾಗಿವೆ.ಎಂಡಿಎಂಎ, ಕೊಕೇನ್ ಹಾಗೂ ಬ್ರೌನ್ ಶುಗರ್ ಬೆಂಗಳೂರಿಗೆ ಬರುತ್ತಿದೆ. ವಿದೇಶಗಳಿಂದ ನಗರದ ವಿದೇಶಿ ಪೋಸ್ಟ್ ಆಫೀಸ್ಗೆ ಮಾದಕ ವಸ್ತುಗಳು ಬರ್ತಿವೆ ಎಂಬ ಸ್ಪೋಟಕ ವಿಚಾರ ಸಿಸಿಬಿ ಪರಿಶೀಲನೆ ವೇಳೆ ಪತ್ತೆಯಾಗಿದೆ.

ಚಾಮರಾಜಪೇಟೆ ಫಾರಿನ್ ಪೋಸ್ಟ್ ಆಫೀಸ್ನಲ್ಲಿ ಬರೋಬ್ಬರಿ 626 ಮಾದಕ ವಸ್ತು ಪಾರ್ಸಲ್ಗಳು ಪತ್ತೆಯಾಗಿವೆ.2018ರಿಂದಲೂ ಇದೇ ರೀತಿಯಾಗಿ ಕೃತ್ಯ ನಡೆಯುತ್ತಿದೆ ಎಂಬ ಬಗ್ಗೆ ಮಾಹಿತಿ ಸಿಕ್ಕಿದೆ. ಸುಮಾರು 626 ಕೊರಿಯರ್ಗಳಲ್ಲಿ ಮಾದಕ ವಸ್ತುಗಳು ಕಂಡು ಬಂದಿವೆ. ಅಷ್ಟು ಪಾರ್ಸೆಲ್ಗಳು ಯಾರಿಗೆ ಬಂದಿದೆ ಎಂಬುವುದು ಪತ್ತೆಯಾಗಿಲ್ಲ. ಅಪರಿಚಿತ ವ್ಯಕ್ತಿಗಳ ಹೆಸರಲ್ಲಿ ಆರೋಪಿಗಳು ಪಾರ್ಸೆಲ್ ಕಳುಹಿಸಿದ್ದಾರೆ. ಸದ್ಯ ಸಿಸಿಬಿ ಅಧಿಕಾರಿಗಳು ಎಲ್ಲವನ್ನೂ ವಶಕ್ಕೆ ಪಡೆದು ತನಿಖೆ ನಡೆಸುತ್ತಿದ್ದಾರೆ.

Latest Stories

LEAVE A REPLY

Please enter your comment!
Please enter your name here