ವೃಷಣ ಶಸ್ತ್ರಚಿಕಿತ್ಸೆಯ ನಂತರ 6 ವರ್ಷದ ಬಾಲಕ ಸಾವನ್ನಪ್ಪಿರುವ ಘಟನೆ ರಾಮನಗರದಲ್ಲಿ ನಡೆದಿದೆ. ವೈದ್ಯರ ನಿರ್ಲಕ್ಷದಿಂದ ಬಾಲಕ ಆರ್ಯ ಮೃತಪಟ್ಟಿರುವುದಾಗಿ ಪೋಷಕರು ಆರೋಪಿಸುತ್ತಿದ್ದಾರೆ. ಒಂದೇ ವೃಷಣವನ್ನು ಹೊಂದಿದ್ದ ಆರ್ಯ ಮಿಷನ್ ಆಸ್ಪತ್ರೆಗೆ ದಾಖಲಾಗಿದ್ದ. ಹಲವು ಆಸ್ಪತ್ರೆಗಳ ವೈದ್ಯರಿಗೆ ಈಗಾಗಲೇ ಪೋಷಕರು ಆರ್ಯನನ್ನು ಚಿಕಿತ್ಸೆಗೆ ಎಂದು ತೋರಿಸಿದ್ದರು.
ಒಂದೇ ವೃಷಣವಿದ್ದರೂ ವೈದ್ಯರು ಬದುಕಬಹುದು ಎಂದು ಸಲಹೆ ನೀಡಿದ್ದರು. ಆದರೆ ಶ್ರೀದೇವಿ ಆಸ್ಪತ್ರೆಯ ವೈದ್ಯರು ಆಪರೇಷನ್ ಮಾಡಿಸಬೇಕೆಂದಿದ್ದರು. ನಿನ್ನೆ ಶ್ರೀದೇವಿ ಆಸ್ಪತ್ರೆಗೆ 6 ವರ್ಷದ ಬಾಲಕ ಆರ್ಯ ದಾಖಲಾಗಿದ್ದ ಆರೋಗ್ಯವಾಗಿದ್ದ ಆರ್ಯನಿಗೆ ವೈದ್ಯರು ಚಿಕಿತ್ಸೆ ನೀಡಲು ಮುಂದಾಗಿದ್ದಾರೆ.
ಬೆಳಗ್ಗೆ 11 ಗಂಟೆಗೆ ಆಪರೇಷನ್ ಥಿಯೇಟರ್ ಗೆ ವೈದ್ಯರು ಕರೆದೊಯ್ದಿದ್ದಾರೆ.ಆಪರೇಷನ್ ಆದ ಕೆಲವೇ ಹೊತ್ತಿನಲ್ಲಿ 6 ವರ್ಷದ ಬಾಲಕ ಆರ್ಯ ಸಾವನ್ನಪ್ಪಿದ್ದಾನೆ ಈ ಒಂದು ಬಾಲಕನ ಸಾವಿಗೆ ಶ್ರೀದೇವಿ ಆಸ್ಪತ್ರೆಯ ವೈದ್ಯರೇ ಕಾರಣವೆಂದು ಪೋಷಕರು ಆರೋಪಿಸಿದ್ದಾರೆ. ಶ್ರೀದೇವಿ ಮಿಷನ್ ಆಸ್ಪತ್ರೆಯ ಮುಂಭಾಗ ಇದೀಗ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಶ್ರೀದೇವಿ ಆಸ್ಪತ್ರೆಗೆ ಎಸ್ಪಿ ಕಾರ್ತಿಕ್ ರೆಡ್ಡಿ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.