ಆನ್ಲೈನ್ ಗೇಮ್ ಗೆ ಮತ್ತೊಂದು ಬಲಿ
ಈಗಾಗಲೇ ಸಾಮಾಜಿಕ ವಲಯದಲ್ಲಿ ಹಲವು ಬಾರಿ ರಮ್ಮಿ ಆನ್ಲೈನ್ ಗೇಮ್ ಬ್ಯಾನ್ ಮಾಡುವಂತೆ ಕೂಗು ಎದ್ದಿತ್ತು.
ಅದೆಷ್ಟೋ ಬಾರಿ ಸ್ಟಾರ್ ನಟರು ಆನ್ಲೈನ್ ಗೇಮ್ ಅನ್ನು ಪ್ರಮೋಟ್ ಮಾಡಬಾರದು, ಸ್ಟಾರ್ ನಟರು ಗಳು ಆನ್ಲೈನ್ ಗೇಮ್ ಪ್ರಮೋಟ್ ಮಾಡಿದರೆ ಸಾವಿರಾರು ಜನರು ಈ ಗೀಳಿಗೆ ಬಿದ್ದು ಹಲವಾರು ಕುಟುಂಬಗಳು ಬೀದಿಗೆ ಬರುತ್ತವೆಂಬ ದೂರಾಲೋಚನೆ ಯಿಂದ ಹಲವರು ಆನ್ಲೈನ್ ರಮ್ಮಿ ಗೇಮಿಂಗ್ ವಿರುದ್ಧ ದ್ವನಿ ಎತ್ತಿದ್ದರು.
ಆದರೆ ಗದಗ ಮೂಲದ 37ವರ್ಷದ ಜಗದೀಶ್ ಹಳೆಮನಿ ಎಂಬಾತ ರಮ್ಮಿ ಗೇಮಿಂಗ್ ಗೀಳಿಗೆ ಬಿದ್ದು ಇಂದು ಆತ್ಮಹತ್ಯೆಗೆ ಶರಣಾಗಿದ್ದಾನೆ.
ವ್ಯಾಪಾರಸ್ಥ ನಾಗಿದ್ದ ಜಗದೀಶ್ ಕೆಲವು ತಿಂಗಳು ಗಳಿಂದ ಆನ್ಲೈನ್ ರಮ್ಮಿ ಹಿಂದೆ ಬಿದ್ದು ಲಕ್ಷಾಂತರ ರೂಪಾಯಿಗಳನ್ನು ಕಳೆದುಕೊಂಡಿದ್ದ ಜಗದೀಶ್ ಖಿನ್ನತೆಗೆ ಒಳಗಾಗಿದ್ದ ನವೆಂಬರ್ 30ರಂದು ಗದಗದ ಲಾಡ್ಜ್ ಒಂದರಲ್ಲಿ ಕಂಠಪೂರ್ತಿ ಕುಡಿದು ಆತ್ಮಹತ್ಯೆಗೆ ಶರಣಾಗಿದ್ದಾನೆ.
ಸಾವಿಗೂ ಮುನ್ನ ಜಗದೀಶ್ ಹಳೆಮನಿ ಡೆತ್ ನೋಟ್ ಬರೆದಿದ್ದು ತನ್ನ ಸಾವಿಗೆ ರಮ್ಮಿ ಗೇಮ್ ಚಟವೇ ಕಾರಣವೆಂದೂ ಹಾಗೂ ರಮ್ಮಿ ಗೇಮ್ ಅನ್ನು ಬ್ಯಾನ್ ಮಾಡುವಂತೆ ಸಹ ಮನವಿ ಮಾಡಿದ್ದಾನೆ.
ರಮ್ಮಿ ಗೇಮಿಂಗ್ ಆಡುವ ಮುನ್ನ ಮತ್ತೊಮ್ಮೆ ಯೋಚಿಸುವಂತೆ ಈ ಪ್ರಕರಣ ಮುನ್ನೆಚ್ಚರಿಕೆ ನೀಡುತ್ತಿದೆ.
ಆನ್ಲೈನ್ ಗೇಮಿಂಗ್ಗೆ ಬಲಿ
Date: