26.9 C
Bengaluru
Saturday, January 25, 2025

ತೃತೀಯ ಲಿಂಗಿಗಳಿಗೆ ವಿಶೇಷ ಅವಕಾಶ

Date:

ತೃತೀಯ ಲಿಂಗಿಗಳಿಗೆ ವಿಶೇಷ ಅವಕಾಶ

  • ನಾನು ಅವನಲ್ಲ ಅವಳು *
    ತೃತೀಯ ಲಿಂಗಿಗಳು ಹೌದು ಎಲ್ಲರಿಂದ ಎಲ್ಲಾ ಸವಲತ್ತುಗಳಿಂದ ,ವಂಚಿತರಾಗಿರುವ ತೃತೀಯ ಲಿಂಗಿಗಳು ಮೊದಲು ತಮ್ಮ ಕುಟುಂಬದವರಿಂದಲೇ ನಿರ್ಲಕ್ಷೆಗೆ ಒಳಪಟ್ಟಿರುತ್ತಾರೆ.ಯಾರಿಗೂ ಯಾರಿಂದಲೂ ಏನನ್ನು ಬಯಸದೆ ತಮ್ಮಷ್ಟಕ್ಕೆ ತಾವು ಜೀವನ ನಡೆಸಲು ಬಯಸುತ್ತಾರೆ.ಸ್ವಾಭಿಮಾನಿ ಜೀವನ ನಡೆಸಲು ಸಮಾಜದಲ್ಲಿ ಅವರಿಗೆ ಅವಕಾಶಗಳ ಕೊರತೆ, ವಿದ್ಯಾಭ್ಯಾಸದ ಕೊರತೆ ,ಕೌಟುಂಬಿಕ ವಾತಾವರಣದ ಕೊರತೆ ಹೀಗೆ ಹುಡುಕ್ಕುತ್ತ ಹೋದರೆ ಹಲವಾರು ಸಮಸ್ಯೆಗಳ ಸುಳಿವಿನಲ್ಲಿ ಸಿಲುಕಿರುವವರು ಈ ನಮ್ಮ ತೃತೀಯ ಲಿಂಗಿಗಳು .ಅವರೂ ನಮ್ಮಂತೆ ಮನುಷ್ಯರು ಎಲ್ಲರಂತೆ ಅವರಿಗೂ ಸಮಾಜದಲ್ಲಿ ಬದುಕುವ ಹಕ್ಕಿದೆ ಎಂಬುದನ್ನು ನಾವೂ ನೀವೆಲ್ಲರೂ ಅರಿತರೆ ಒಂದು ಸಮುದಾಯದ ಉಳಿವಿಗೆ ಅಭಿವೃದ್ಧಿಗೆ ಅದು ಬಹಳ ಸಹಕಾರಿಯಾಗುತ್ತದೆ .ಆದರೆ ಇದಾವುದನ್ನು ಪರಿಗಣಿಸದೆ ಅವರನ್ನು ದೂಷಿಸುವ ಉತ್ಪ್ರೇಕ್ಷೆಗೆ ಒಳಪಡಿಸುವವರು. ಆದರೆ ಹೈದೆರಾಬಾದ ಪೊಲೀಸರು ತೃತೀಯ ಲಿಂಗಿಗಳಿಗೆ ಪೊಲೀಸ್ ಇಲಾಖೆಯಲ್ಲಿ ವಿಶೇಷ ಅವಕಾಶವನ್ನು ಮಾಡಿಕೊಟ್ಟಿದೆ.
    ಹೈದರಾಬಾದ್ ಪೊಲೀಸ್ ಇಲಾಖೆ ಒಟ್ಟು 44ತೃತೀಯ ಲಿಂಗಿಗಳಿಗೆ ಟ್ರಾಫಿಕ್ ಅಸಿಸ್ಟೆಂಟ್ ಹುದ್ದೆಗೆ ನೇಮಕ ಮಾಡಿಕೊಂಡಿದ್ದಾರೆ.
    ದೈಹಿಕ ಪರೀಕ್ಷೆಯಲ್ಲಿ ಒಟ್ಟು 58ಮಂದಿ ತೃತೀಯ ಲಿಂಗಿಗಳು ಭಾಗವಹಿಸಿದ್ದರು.
    ಓಟ ಲಾಂಗ್ ಜಂಪ್ ಮುಂತಾದ ಅನೇಕ ತರಹದ ಪರೀಕ್ಷೆಗಳನ್ನು ನೀಡಲಾಗಿತ್ತು ಅದರಲ್ಲಿ ತೇರ್ಗಡೆಯಾದ 44ತೃತೀಯ ಲಿಂಗಿಗಳಿಗೆ ಟ್ರಾಫಿಕ್ ಅಸಿಸ್ಟೆಂಟ್ ಹುದ್ದೆಗೆ ಆಯ್ಕೆ ಮಾಡಿಕೊಳ್ಳಲಾಗಿದೆ.
    ಈ ಪರೀಕ್ಷೆ ಆಯೋಜಿಸುತ್ತಿದ್ದಂತೆ ಬಹು ಉತ್ಸಾಹ ದಿಂದಲೇ ತೃತೀಯ ಲಿಂಗಿಗಳು ಭಾಗವಹಿಸಿದ್ದರು ಹಾಗೂ ಅತ್ಯುತ್ಸಾಹದಿಂದಲೇ ಪರೀಕ್ಷೆಯಲ್ಲಿ ಭಾಗವಹಿಸಿದ್ದರು ಎಂದು ತಿಳಿದು ಬಂದಿದೆ.
    ಸಿಎಂ ರೇವಂತ್ ರೆಡ್ಡಿ ಇಲಾಖೆಯಲ್ಲಿ ಮುಕ್ತ ಅವಕಾಶ ನೀಡುವಂತೆ ಸೂಚನೆ ನೀಡಿದ್ದಾರೆ ಎಂದು ತಿಳಿದು ಬಂದಿದೆ.
    ಅವರೂ ನಮ್ಮ ನಿಮ್ಮಂತೆ ಮನುಷ್ಯರು ಅವರಿಗೂ ಮನಸ್ಸಿದೆ ,ನಮ್ಮ ನಿಮ್ಮಂತೆ ಸ್ವಾಭಿಮಾನದಿಂದ ಜೀವಿಸುವ ಹಕ್ಕಿದೆ .
    ಯಾರೋ ಒಬ್ಬಿಬ್ಬರ ನಡವಳಿಕೆ ಇಂದ ಇಡೀ ಸಮುದಾಯವೇ ತಪ್ಪೆಂದು ಭಾವಿಸದೆ ಅವರನ್ನೂ ಗೌರವದಿಂದ ಕಾಣೋಣ. ಅವರಿಗೂ ಸಮಾನ ಅವಕಾಶ ನೀಡೋಣ, ನಮ್ಮ ಕರ್ನಾಟಕ ಸರ್ಕಾರವು ಈ ವಿಶೇಷ ಅಭಿಯಾನವನ್ನು ಶೀಘ್ರ ದಲ್ಲೇ ಪ್ರಾರಂಭಿಸಲಿ ಎಂದು ಮನವಿ ಮಾಡೋಣ.

Latest Stories

LEAVE A REPLY

Please enter your comment!
Please enter your name here