ಆತ್ಮ ರಕ್ಷಣೆಗಾಗಿ ಗುಂಡಿನ ದಾಳಿ
ಬೆಳ್ಳಂ ಬೆಳಿಗ್ಗೆಯೇ ಪೊಲೀಸರ ಬಂದೂಕು ಸದ್ದು ಮಾಡಿದೆ.
ಬಹಳ ದಿನಗಳಿಂದ ತಲೆ ಮರೆಸಿ ಕೊಂಡಿದ್ದ ರೌಡಿ ಶೀಟರ್ ಬೆಸ್ತ ಮಾರನಹಳ್ಳಿ ಲೋಕೇಶ್ ಅಲಿಯಾಸ್ ಲೋಕಿ ಗ್ಯಾಂಗ್ ಪತ್ತೆಗಾಗಿ ಪೊಲೀಸರು ಬಲೆ ಬೀಸಿದ್ದರು,
ಆದರೆ ರೌಡಿಶೀಟರ್ ಅಂಡ್ ಗ್ಯಾಂಗ್ ಪೊಲೀಸರಿಂದ ತಲೆ ತಪ್ಪಿಸಿಕೊಂಡು ತಿರುಗಾಡುತಿತ್ತು.
ಆದರೆ ಇಂದು ಬೆಳಿಗ್ಗೆ ಬೆಂಗಳೂರು ಹೊರವಲಯದ ಆನೇಕಲ್ ತಾಲ್ಲೂಕಿನ ಮಾಯಸಂದ್ರ ಬಳಿ ಲೋಕಿ ಗ್ಯಾಂಗ್ ಅನ್ನು ಬಂಧಿಸಲು ತೆರಳಿದ್ದ ವೇಳೆ ಪೊಲೀಸರ ಮೇಲೆ ಹಲ್ಲೆಗೆ ರೌಡಿ ಶೀಟರ್ ಲೋಕಿ ಮುಂದಾಗಿದ್ದು ಈ ವೇಳೆ ಆತ್ಮ ರಕ್ಷಣೆಗೆ ರೌಡಿ ಶೀಟರ್ ಕಾಲಿಗೆ ಜಿಗಣಿ ಇನ್ಸ್ಪೆಕ್ಟರ್ ಮಂಜುನಾಥ್ ಗುಂಡು ಹಾರಿಸಿದ್ದಾರೆ.
ಸಧ್ಯ ಆರೋಪಿ ಲೋಕಿಯನ್ನು ಆಸ್ಪತ್ರೆಗೆ ಸೇರಿಸಲಾಗಿದೆ.