ಹೆಣ್ಣಿಗೆ ಅವಹೇಳನಕಾರಿ ಹೇಳಿಕೆ ಸಲ್ಲದು
ಬೆಳಗಾವಿ ಅಧಿವೇಶನದಲ್ಲಿ ವಿಧಾನ ಪರಿಷತ್ ಕಲಾಪದ ವೇಳೆ ಬಿಜೆಪಿ ಸದಸ್ಯ ಸಿ.ಟಿ. ರವಿ ಹಾಗೂ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ ನಡುವೆ ವಾಗ್ವಾದ ಶುರುವಾಗಿದೆ. ಆರೋಗ್ಯಕರವಾಗಿರಬೇಕಾದ ಚರ್ಚೆ ಕೆಲವೇ ನಿಮಿಷಗಳಲ್ಲಿ ವೈಯಕ್ತಿಕ ನಿಂದನೆಗೆ ಆಸ್ಪದ ಮಾಡಿ ಕೊಟ್ಟಿದೆ.
ಸಿ.ಟಿ. ರವಿ ಯವರು ರಾಹುಲ್ ಗಾಂಧಿ ಯವರನ್ನು ‘ಡ್ರಗ್ ಅಡಿಕ್ಟ್ ‘ ಎಂದು ಕರೆದಿದ್ದರಿಂದ ಅಲ್ಲೇ ಇದ್ದ ಲಕ್ಷ್ಮೀ ಹೆಬ್ಬಾಳ್ಕರ್ ರವರು ತಮ್ಮ ನಾಯಕರಾದ ರಾಹುಲ್ ಗಾಂಧಿ ಯವರನ್ನು ಡ್ರಗ್ ಅಡಿಕ್ಟ್ ಎಂದು ಕರೆಯುವ ನೀವು ಆಕ್ಸಿಡೆಂಟ್ ಮಾಡಿ ಒಂದು ಜೀವ ತೆಗೆದವರು ನೀವೂ ಕೊಲೆಗಡುಕ ಎಂದಿದ್ದಾರೆ, ಇದರಿಂದ ಕೋಪಗೊಂಡ ಸಿ.ಟಿ. ರವಿಯವರು ಲಕ್ಷ್ಮೀ ಹೆಬ್ಬಾಳ್ಕರ್ ರವರನ್ನು ಹಲವು ಬಾರಿ ಪ್ರಾ……ಟ್ ಎಂಬ ಅಶ್ಲೀಲ ಪದ ಬಳಸಿ ಸಂಭೋದಿಸಿದ್ದಾರಂತೆ.
ತುಂಬಿದ ಸಭೆಯಲ್ಲಿ ಇಂತಹ ಅಶ್ಲೀಲ ಪದ ಬಳಕೆ ನಿಜವಾಗಲೂ ಅವಮಾನಕರ ಸಂಗತಿ ಎಂದು ಅಲ್ಲಿದ್ದ ಪ್ರತಿಯೊಬ್ಬರ ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಒಂದು ಹೆಣ್ಣು ಮಗಳು ಎಂದು ಕೂಡ ಪರಿಗಣಿಸದೆ ಅಶ್ಲೀಲ ಪದ ಬಳಕೆ ಎಲ್ಲೆಡೆ ತೀವ್ರ ಆಕ್ರೋಶಕ್ಕೆ ಗುರಿಯಾಗಿದೆ .
ರವಿಯವರ ಅಶ್ಲೀಲ ಪದ ಬಳಕೆಯಿಂದ ತೀವ್ರ ಮನನೊಂದು ಲಕ್ಷ್ಮೀ ಹೆಬ್ಬಾಳ್ಕರ್ ಕಣ್ಣೀರು ಹಾಕಿದ್ದಾಗಿ ವರದಿಯಾಗಿದ್ದು ,
ಈ ಕುರಿತು ಸಭಾಪತಿ ಬಸವರಾಜ್ ಹೊರಟ್ಟಿ ಅವರ ಕಚೇರಿಗೆ ತೆರಳಿ ಲಕ್ಷ್ಮಿಯವರು ದೂರು ನೀಡಿದ್ದಾರೆ ಹಾಗೂ ಅವರ ಎದುರು ಕೂಡ ಹೆಬ್ಬಾಳ್ಕರ್ ರವರು ಕಣ್ಣೀರು ಸುರಿಸಿದ್ದಾರೆ ಎಂದು ತಿಳಿದು ಬಂದಿದೆ .
ಸಿಎಂ ಸಿದ್ದರಾಮಯ್ಯ ಅವರ ಕಚೇರಿಗೆ ಡಿಸಿಎಂ ಡಿ.ಕೆ. ಶಿವಕುಮಾರ್ ಬೈರತಿ ಸುರೇಶ್ ಆಗಮಿಸಿ ಘಟನೆಯ ವಿವರ ನೀಡಿದ್ದು , ಸಿ.ಟಿ. ರವಿ ಅಮಾನತ್ತಿಗೆ ಮನವಿ ಮಾಡಿದ್ದಾರೆ.
ಹತ್ತು ಭಾರಿ ಅಶ್ಲೀಲ ಪದ ಬಳಕೆ ಮಾಡಿದ್ದಾರೆಂಬ ಆರೋಪದ ಬೆನ್ನಲ್ಲೇ ಸಭಾಪತಿಗಳು ಆಡಿಯೋ ವಿಡಿಯೋ ಪರಿಶೀಲನೆಗೆ ಸೂಚಿಸಿದ್ದಾರೆ.
ಹೆಣ್ಣಿನ ತೇಜೋವಧೆ ಸಲ್ಲದು. ಸಚಿವೆಗೂ ಮುನ್ನ ಆಕೆಯೊಬ್ಬಳು ಹೆಣ್ಣು ಮಗಳು. ಎಂಬುದನ್ನು ಅರಿಯಬೇಕಾದ್ದು ಅವಶ್ಯ ಎಂಬ ಮಾತು ಎಲ್ಲೆಡೆ ಕೇಳಿ ಬರುತ್ತಿದೆ.
ಹೆಣ್ಣಿನ ತೇಜೋವಧೆ ಸಲ್ಲದು
Date: