ಘಟನೆಯ ವಿವರ :ಜುಲೈ 3 ನೇ ತಾರೀಖು ಕೆಂಗೇರಿ ಠಾಣಾ ವ್ಯಾಪ್ತಿಯ ರಾಮಸಂದ್ರದ ನಿರ್ಜನ ಪ್ರದೇಶದಲ್ಲಿ ಅರೆಬೆಂದ ಸ್ಥಿತಿಯಲ್ಲೊಂದು ಮಹಿಳೆ ಶವ ಪತ್ತೆಯಾಗಿತ್ತು, ಸ್ಥಳೀಯರ ಮಾಹಿತಿ ಪಡೆದು ಸ್ಥಳಕ್ಕೆ ತೆರಳಿದ್ದ ಕೆಂಗೇರಿ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಆರಂಭಿಸಿದ್ದರು.ಯಾರೋ ಕೊಲೆಗಡುಕರು ಮಹಿಳೆ ಕೊಂದು ಅದಕ್ಕೆ ಬೆಂಕಿ ಹಚ್ಚಿ ಮುಖ ಚಹರೆ ಕೂಡ ಸಿಗದಂತೆ ಮಾಡಿ ಎಸ್ಕೇಪ್ ಆಗಿದ್ದರು.ಸಣ್ಣದೊಂದು ಸುಳಿವು ಸಹ ಬಿಡದೆ ಹೋಗಿದ್ದ ,ಆರೋಪಿಗಳ ಜಾಡು ಪತ್ತೆ ಹಚ್ಚಿರುವ ಕೆಂಗೇರಿ ಗೇಟ್ ಉಪ ವಿಭಾಗದ ಪೊಲೀಸರು ಆರೋಪಿಗಳನ್ನ ದಸ್ತಾಗಿರಿ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ.
ಗುರುತು ಸಿಗದ ಮಹಿಳೆ ಹೆಸರು ನಗೀನಾ.ಆಕೆಯ ಗಂಡ ಮಹಮದ್ ರಫೀಕ್ ಸ್ನೇಹಿತನೊಂದಿಗೆ ಸೇರಿ ಪತ್ನಿ ಕೊಂದಿದ್ದಾಗಿ ತನಿಖೆ ವೇಳೆ ತಿಳಿದು ಬಂದಿದೆ .
ಆರೋಪಿ ರಫೀಕ್ ಮೂಲತ: ಯಾದಗಿರಿ ಜಿಲ್ಲೆಯವನಾಗಿದ್ದು, ಕೆಲಸ ಅರಸಿ ಬೆಂಗಳೂರಿಗೆ ಬಂದಿದ್ದ. ಇಬ್ಬರಿಗೂ ಈ ಹಿಂದೆಯೇ ಮದುವೆಯಾಗಿದ್ದು, ಪರಸ್ಪರ ಒಪ್ಪಿಗೆ ಹಾಗೂ ಕುಟುಂಬಸ್ಥರ ಸಮ್ಮುಖದಲ್ಲಿ ಎರಡನೇಮದುವೆಯಾಗಿದ್ರು, ಮದುವೆಯಾದ ಆರಂಭದಲ್ಲಿ ಇಬ್ಬರ ನಡುವೆ ಒಳ್ಳೆ ಪ್ರೀತಿ, ವಿಶ್ವಾಸವಿತ್ತು. ಆದರೆ ಇತ್ತಿಚೇಗೆ ರಫೀಕ್ ಗೆ ಪತ್ನಿ ನಗೀನಾ ಅಕ್ರಮ ಸಂಬಂಧ ಹೊಂದಿದ್ದಾಳೆ ಎಂಬ ಅನುಮಾನ ಶುರುವಾಗಿತ್ತು. ಇದಕ್ಕೆ ಪುಷ್ಠಿ ನೀಡುವಂತೆ ನಗೀನಾ ಪರಪುರುಷನ ಜೊತೆಗಿರುವುದನ್ನು ಗಂಡ ಕಣ್ಣಾರೆ ಕಂಡಿದ್ದ. ಅಂದಿನಿಂದ ನಗೀನಾಗೆ ಒಂದು ಗತಿ ಕಾಣಿಸಬೇಕು ಅಂತಾ ನಿರ್ಧರಿಸಿದ್ದ ರಫೀಕ್ , ತನ್ನ ಆತ್ಮೀಯ ಸ್ನೇಹಿತ ಪ್ರಜ್ವಲ್ ಬಳಿ ಈ ವಿಚಾರ ಹಂಚಿಕೊಂಡಿದ್ದ.. ಹೇಗಾದ್ರು ಮಾಡಿ ಆಕೆಯನ್ನ ಮುಗಿಸಲು ಸಹಾಯ ಮಾಡುವಂತಲೂ ಕೇಳಿದ್ದ..
ಇನ್ನೂ ಇಬ್ಬರೂ ಸೇರಿ ನಗೀನಾಳನ್ನು ಮುಗಿಸಬೇಕು ಅಂತಾ ಪ್ಲಾನ್ ಮಾಡಿದ್ದು, ಇದೇ ತಿಂಗಳ 1ನೇ ತಾರೀಖು ರಫೀಕ್ ಹೆಂಡತಿ ನಗೀನಾಳಿಗೆ ಕರೆ ಮಾಡಿದ್ದ.. ಕರೆ ಮಾಡಿ ನಾನು ರಾಮಸಂದ್ರದ ನಿರ್ಜನ ಪ್ರದೇಶದಲ್ಲಿ ಕುಡಿದು ಬಿದ್ದಿದ್ದು, ಬಂದು ಕರೆದುಕೊಂಡು ಹೋಗು ಎಂದಿದ್ದ. ಹೀಗಾಗಿ ಗಂಡನನ್ನು ಕರೆದುಕೊಂಡು ಬರಲು ಅಲ್ಲಿಗೆ ಹೋಗಿದ್ದ ನಗೀನಾ ,ಆಕೆ ಬಂದ ತಕ್ಷಣ ರಫೀಕ್ ಕಿರಿಕ್ ಸ್ಟಾರ್ಟ್ ಮಾಡಿದ್ದ. ನನಗೆ ನೀನು ಮೋಸ ಮಾಡಿದ್ದೀಯಾ ಅಂತಾ ಕೂಗಾಡಿ ಆಕೆಗೆ ಮನಬಂದಂತೆ ಥಳಿಸಿದ್ದ. ಸ್ಥಳದಲ್ಲಿದ್ದ ಸ್ನೇಹಿತ ಪ್ರಜ್ವಲ್ ಸಹಾಯದಿಂದ ನಗೀನಾ ತಲೆ ರಾಡ್ ನಿಂದ ಹೊಡೆದು ಕುತ್ತಿಗೆ ಹಿಸುಕಿ ಕೊಲೆ ಮಾಡಿದ್ದಾರೆ. ಹೆಣದ ಗುರುತು ಸಿಗಬಾರದು ಅಂತಾ. ಪೆಟ್ರೋಲಸುರಿದು ಬೆಂಕಿ ಹಚ್ಚಿ ಎಸ್ಕೇಪ್ ಆಗಿದ್ದರು.. ಅಷ್ಟೇ ಅಲ್ಲದೇ ಮುಖದ ಗುರುತು ಸಿಗಬಾರದೆಂದು ತಲೆ, ಮೀಸೆ ಹಾಗೂ ಗಡ್ಡ ಬೋಳಿಸಿಕೊಂಡಿದ್ದ. ಜೊತೆಗೆ ಹೆಂಡತಿ ಮೊಬೈಲ್ ತೆಗೆದುಕೊಂಡು ಹೋಗಿ ಆಗಾಗ ಆಫ್ ಅಂಡ್ ಆನ್ ಮಾಡಿ ಪೊಲೀಸರ ದಾರಿ ತಪ್ಪಿಸಿದ್ದ. ಪಶ್ಚಿಮ ವಿಭಾಗ ಡಿಸಿಪಿ ಲಕ್ಷ್ಮಣ್.ಬಿ. ನಿಂಬರಗಿ ಮಾರ್ಗದರ್ಶನ ಹಾಗೂ ಕೆಂಗೇರಿ ಗೇಟ್ ಉಪ ವಿಭಾಗದ ಎಸಿಪಿ ಕೋದಂಡರಾಮ್ ಅವರ ನೇತೃತ್ವದಲ್ಲಿ ಇನ್ಸ್ ಪೆಕ್ಟರ್ ವಸಂತ್ ,ಪಿಎಸ್ ಐ ನಾಗರಾಜ್ ,ಪಿಎಸ್ ಐ ಅಂಬಿಕಾ ,ಎಎಸ್ ಐ ಚೋಳಪ್ಪ ಹಾಗೂ ತಂಡ ಇಬ್ಬರು ಕೊಲೆಗಡುಕರನ್ನ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.. ಯಾವುದೇ ಕ್ಲೂ ಇಲ್ಲದ ಕೊಲೆ ಕೇಸ್ ಭೇದಿಸಿದ ಕೀರ್ತಿ ಪಶ್ಚಿಮ ವಿಭಾಗದ ಪೊಲೀಸರಿಗೆ ಸಲ್ಲುತ್ತದೆ..
ಸುಳಿವೇ ಇಲ್ಲದಂತೆ ಕೊಲೆ ಮಾಡಿದರೆ ಪೊಲೀಸರಿಗೆ ತಿಳಿಯುವುದಿಲ್ಲ ಎಂಬ ಭ್ರಮೆ ಯಲ್ಲಿದ್ದ ಆರೋಪಿಗಳಿಗೆ, ಪಶ್ಚಿಮ ವಿಭಾಗದ ಪೊಲೀಸರು ಅಪರಾಧ ಮಡಿದ ಆರೋಪಿಗಳು ಯಾವುದೇ ಬಿಲದಲ್ಲಿದ್ದರು ಅವರ ಹೆಡೆ ಮುರಿ ಕಟ್ಟುವಲ್ಲಿ ಪೊಲೀಸರು ಬದ್ದ ಎಂದು ಸಾಬೀತು ಪಡಿಸಿದ್ದಾರೆ .
ಸುಳಿವೇ ಇಲ್ಲದ ಮಹಿಳೆ ಕೊಲೆ ಪ್ರಕರಣವನ್ನು ಭೇದಿಸಿದ ಪಶ್ಚಿಮ ವಿಭಾಗದ ಪೊಲೀಸರು.
Date: