ಶಾಲಾ ವಾಹನ ಚಾಲಕರ ತಪಾಸಣೆ
ಮಕ್ಕಳ ಹಿತದೃಷ್ಟಿಯಿಂದ ಬೆಂಗಳೂರು ನಗರ ಸಂಚಾರ ಪೊಲೀಸರು ಇಂದು ನಗರಾದ್ಯಂತ ಕಾರ್ಯಾಚರಣೆ ನಡೆಸಿ ಶಾಲಾ ಬಸ್ ಚಾಲಕರನ್ನು ತಪಾಸಣೆ ನಡೆಸಿದರು.
ಕೇವಲ ದಂಡ ವಸೂಲಿ ಮಾಡುವುದೇ ಸಂಚಾರ ಪೊಲೀಸರ ಕಾರ್ಯ ಎಂದು ಭಾವಿಸಿರುವವವರು ಈ ಸುದ್ದಿ ಓದಲೇಬೇಕು
ಸಂಚಾರ ಪೊಲೀಸರು ಅವ್ರ ಪ್ರಪ್ರಥಮ ಆದ್ಯತೆಯನ್ನು ಸಾರ್ವಜನಿಕರ ಸುರಕ್ಷತೆಗೆ ನೀಡುತ್ತಾರೆ.
ಪೋಷಕರು ತಮ್ಮ ಮಕ್ಕಳ ಸುರಕ್ಷತೆ ಹಾಗೂ ಸಂಚಾರದ ಹಿತದೃಷ್ಟಿಯಿಂದ ಸ್ಕೂಲ್ ಬಸ್ ಗಳನ್ನೇ ಅವಲಂಬಿಸಿರುತ್ತಾರೆ.
ಆದರೆ ಈ ಸ್ಕೂಲ್ ಬಸ್ ಚಾಲಕರು ಕುಡಿದು ವಾಹನ ಚಾಲನೆ ಮಾಡುತ್ತಿರುವ ಪ್ರಕರಣಗಳೂ ಸಹ ವರದಿಯಾದ್ದರಿಂದ, ಬೆಳ್ಳಂ ಬೆಳ್ಳಿಗ್ಗೆ ವಿಶೇಷ ಕಾರ್ಯಾಚರಣೆ ನಡೆಸಿದ ಬೆಂಗಳೂರು ಪೂರ್ವ ವಿಭಾಗದ ಸಂಚಾರಿ ಪೊಲೀಸರು ಒಟ್ಟು 1,216 ಶಾಲಾ ವಾಹನಗಳ ತಪಾಸಣೆ ನಡೆಸಿದ್ದು ಅದರಲ್ಲಿ 04 ಶಾಲಾ ವಾಹನ ಚಾಲಕರರಮೇಲೆ ಪ್ರಕರಣ ದಾಖಲಿಸಿ ಅವರುಗಳ DL ರದ್ದು ಪಡಿಸಲು RTO ಕಚೇರಿಗೆ ದೂರು ಸಲ್ಲಿಸಲಾಗಿರುತ್ತದೆ.
ಅಷ್ಟೇ ಅಲ್ಲದೇ ಮಕ್ಕಳನ್ನು ಸುರಕ್ಷಿತವಾಗಿ ಶಾಲೆಗೆ ತಲುಪಿಸುವ ಜವಾಬ್ದಾರಿ ಹೊತ್ತ ಈ ಬಸ್ ಚಾಲಕರುಗಳು ಅಗತ್ಯಕ್ಕಿಂತ ಹೆಚ್ಚು ಮಕ್ಕಳನ್ನು ಬಸ್ ನಲ್ಲಿ ಕರೆದುಕೊಂಡು ಹೋಗುತ್ತಿರುವುದು ಕಂಡು ಬಂದಿದ್ದು ಅವರುಗಳ ವಿರುದ್ದವೂ ಕೂಡ ಒಟ್ಟು 32 ಪ್ರಕರಣಗಳನ್ನು ದಾಖಲಿಸಲಾಗಿದೆ.
ಟ್ರಾಫಿಕ್ ಪೊಲೀಸರ ಅಚಾನಕ್ ಹಾಗೂ ವಿಶೇಷ ಕಾರ್ಯಾಚರಣೆಯಿಂದ ಹಲವು ಶಾಲಾ ಆಡಳಿತ ಮಂಡಳಿಗಳು ಎಚ್ಚೆತ್ತು ಕೊಂಡಿವೆ. ಆಗಾಗ ಇಂತಹ ಕಾರ್ಯಾಚರಣೆಯನ್ನು ಬೆಂಗಳೂರು ನಗರ ಸಂಚಾರ ಪೊಲೀಸರು ನಡೆಸುತ್ತಿರುವುದರಿಂದ ಅಪಘಾತ ಪ್ರಕರಣಗಳು ಕಡಿಮೆಯಾಗುವುದರಲ್ಲಿ ಸಂಶಯವೇ ಇಲ್ಲ.
ಸಂಚಾರಿ ಪೊಲೀಸರ ವಿಶೇಷ ಕಾರ್ಯಾಚರಣೆ

Date: