28.7 C
Bengaluru
Tuesday, October 8, 2024

ಡ್ರಗ್ಸ್ ಮುಕ್ತ ಸಮಾಜದ ಕನಸು ನನಸಾಗ ಬೇಕಾದರೆ…

Date:


ಮಾದಕ ವ್ಯಸನ ಎಂದರೇನು?

ಯಾವುದೇ ಒಂದು ಚಟಕ್ಕೆ ಮನುಷ್ಯ ಅತಿಯಾಗಿ ಅವಲಂಬಿತನಾಗುವುದು ಹಾಗೂ ಅದು ಚಟಕ್ಕೆ ದಾಸನಾದ ವ್ಯಕ್ತಿಯ ಮೆದುಳು ಹಾಗೂ ನಡವಳಿಕೆಯ ಮೇಲೆ ನೇರ ಪರಿಣಾಮ ಬೀರುವ ಒಂದು ಖಾಯಿಲೆ ಯಾಗಿರುತ್ತದೆ.ಕಾನೂನು ಹಾಗೂ ಕಾನೂನು ಬಾಹಿರ ಔಷಧದ ಬಳಕೆಯನ್ನು ನಿಯಂತ್ರಿಸಲು ಅಸಮರ್ಥತೆಗೆ ಒಳಗಾಗುವುದು.

ಮಾದಕ ದ್ರವ್ಯಗಳೆಂದು ಯಾವುದನ್ನು ಪರಿಗಣಿಸಬಹುದು?



ಮಾದಕ ದ್ರವ್ಯಗಳನ್ನು ಎರಡು ರೀತಿಯಲ್ಲಿ ವರ್ಗೀಕರಿಸಬಹುದು 1)ನೈಸರ್ಗಿಕವಾಗಿ ಔಷಧಗಳು
2)ಸಂಶ್ಲೇಷಿತ ಔಷಧಗಳು
ನೈಸರ್ಗಿಕ ವಾದದ್ದು ಉದಾಹರಣೆಗೆ ಗಾಂಜಾ, ಓಪಿಯಂ ಮುಂತಾದವು
ಸಂಶ್ಲೇಷಿತ ವಾದವುಗಳು ಎಂ ಡಿ ಎಂ ಎ, ಅಫೀಮು, ಮುಂತಾದವು.
3)ಡ್ರಗ್ಸ್ ಮುಕ್ತ ಸಮಾಜಕ್ಕೆ ಪೊಲೀಸ್ ಇಲಾಖೆಯ ಕ್ರಮಗಳು?
ಪೊಲೀಸ್ ಇಲಾಖೆ ಈಗಾಗಲೇ ಮಾದಕ ದ್ರವ್ಯ ಮಾರಾಟಗಾರರ ಜಾಲವನ್ನು ಪತ್ತೆ ಹಚ್ಚಲು ಅವಿರತವಾಗಿ ಶ್ರಮಿಸುತ್ತಿದೆ ಹಾಗೂ ಅಂತಹವರ ವಿರುದ್ಧ ಕಾನೂನು ರೀತ್ಯ ಕ್ರಮ ಕೈಗೊಳ್ಳುತ್ತಿದೆ.


ಡ್ರಗ್ಸ್ ನಿಂದಾಗುವ ದುಷ್ಪರಿಣಾಮಗಳ ಬಗ್ಗೆ ಅರಿವು ಮೂಡಿಸುವ ಕಾರ್ಯಕ್ರಮವನ್ನು ಶಾಲಾ ಕಾಲೇಜು ದಿನಗಳಿಂದಲೇ ಆರಂಭಿಸಬೇಕೆಂಬ ಆಶಯದಿಂದ ವಿದ್ಯಾರ್ಥಿಗಳಲ್ಲಿ ಅರಿವು ಮೂಡಿಸುವ ಕಾರ್ಯಕ್ರಮವನ್ನು ಪೊಲೀಸ್ ಇಲಾಖೆ ಈಗಾಗಲೇ ಕಾರ್ಯರೂಪಕ್ಕೆ ತಂದಿದೆ.


ಡ್ರಗ್ಸ್ ಮುಕ್ತ ಸಮಾಜದ ಕನಸು ನನಸಾಗ ಬೇಕಾದರೆ ಕೇವಲ ಪೊಲೀಸ್ ಇಲಾಖೆ ಮಾತ್ರವಲ್ಲದೆ ಪ್ರತಿಯೊಬ್ಬ ನಾಗರೀಕನೂ ನಮ್ಮೊಂದಿಗೆ ಕೈಜೋಡಿಸಬೇಕು ಆಗ ಮಾತ್ರ ಈ ಮಾದಕ ವ್ಯಸನ ಮುಕ್ತ ಸಮಾಜದ ಸೃಷ್ಟಿ ಸಾಧ್ಯ.


prevention is better than cure ಎಂಬ ಮಾತಿನಂತೆ ಖಾಯಿಲೆ ಬಂದಾಗ ಔಷದಿ ತೆಗೆದುಕೊಳ್ಳುವ ಬದಲು ಅದು ಬರದಂತೆ ಮುನ್ನೆಚ್ಚರಿಕೆ ವಹಿಸುವುದು ಅತೀ ಅವಶ್ಯಕ ಅದರಂತೆ ಮಕ್ಕಳಿಗೆ ಮಾದಕ ವ್ಯಸನದಿಂದ ಉಂಟಾಗುವ ದುಷ್ಪರಿಣಾಮಗಳ ಅರಿವು ಉಂಟಾದರೆ ಅದು ಮಾದಕ ವ್ಯಸನ ಮುಕ್ತ ಸಮಾಜಕ್ಕೆ ಭವ್ಯ ಬುನಾದಿ.
ಸಾರ್ವಜನಿಕರಲ್ಲಿ ನಮ್ಮದೊಂದು ವಿನಂತಿಎಂದರೆ ಸಾರ್ವಜನಿಕರು ಪೊಲೀಸರೊಂದಿಗೆ ಸಹಕರಿಸಬೇಕು, ಮಾದಕ ದ್ರವ್ಯ ಜಾಲದ ಬಗ್ಗೆ ಯಾವುದೇ ಮಾಹಿತಿ ದೊರೆತಲ್ಲಿ ತಡ ಮಾಡದೇ ಅಂತಹ ಮಾಹಿತಿಯನ್ನು ಪೊಲೀಸರೊಂದಿಗೆ ಹಂಚಿಕೊಳ್ಳಬೇಕು, ಯಾವುದೇ ಮಾಹಿತಿ ನೀಡಿದವರ ಐಡೆಂಟಿಟಿಯನ್ನು ಯಾವುದೇ ಕಾರಣಕ್ಕೂ ಬಹಿರಂಗ ಪಡಿಸುವುದಿಲ್ಲ ಹಾಗೂ ನ್ಯಾಯಾಲಯಕ್ಕೆ ಅಲೆದಾಡಬೇಕೆಂಬ ಯಾವುದೇ ಭಯ ಬೇಡ ಮಾಹಿತಿ ನೀಡಿದವರಿಗೆ ಯಾವುದೇ ತೊಂದರೆಯಾಗದಂತೆ ಎಚ್ಚರ ವಹಿಸಲಾಗುತ್ತದೆ.


ಜನಸ್ನೇಹಿ ಪೊಲೀಸ್ ವ್ಯವಸ್ಥೆಗಾಗಿ ಪೊಲೀಸರೊಂದಿಗೆ ಕೈ ಜೋಡಿಸಿ

Latest Stories

LEAVE A REPLY

Please enter your comment!
Please enter your name here