ದಸರಾ ಆನೆಗಳ ಮುಂದೆ ಫೋಟೊ, ಸೆಲ್ಫಿ ತೆಗೆದುಕೊಳ್ಳುವವರಿಗೆ ಕಡಿವಾಣ ಹಾಕಬೇಕು ಎಂದು ಮೈಸೂರಿನಲ್ಲಿ ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಹೇಳಿದ್ದಾರೆ.ಘಟನೆಯ ವಿವರ:ಮೊನ್ನೆ ಇದ್ದಕ್ಕಿದ್ದ ಹಾಗೆ ಆನೆಗಳು ಕಾದಾಟಕ್ಕೆ ಇಳಿದಿದ್ದವು, ಇದರಿಂದ ಸ್ಥಳದಲ್ಲಿದ್ದ ಜನರು ಭಯಭೀತರಾಗಿ ಓದಿದ್ದರು, ಅಂದು ಹೆಚ್ಚು ಜನಸಂದಣಿ ಇರದ ಕಾರಣ, ಹೆಚ್ಚಿನ ಅಪಾಯವೇನೂ ಉಂಟಾಗಲಿಲ್ಲ, ಆದರೆ ಮೂಕ ಪ್ರಾಣಿಗಳ ನಡವಳಿಕೆಯನ್ನು ಹೂಹಿಸಲೂ ಸಾಧ್ಯವಿಲ್ಲ.
ಅರಮನೆ ಆವರಣದಲ್ಲಿ ಕಂಜನ್ ಮತ್ತು ಧನಂಜಯ್ ಆನೆಗಳ ಜಗಳ ವಿಚಾರವಾಗಿ ಮಾತನಾಡಿ, ಬಹಳ ಗಂಭೀರವಾದ ಘಟನೆ ನಡೆದಿದೆ. ಆನೆಗಳ ಗಲಾಟೆ ವಿಡಿಯೋ ನೋಡಿದ್ದೇನೆ. ಇದು ಜನರಿಂದ ಆಗಿರುವುದಲ್ಲ ಎಂದು ವರದಿ ಬಂದಿದೆ. ಭದ್ರತೆಯನ್ನು ಇನ್ನಷ್ಟು ಹೆಚ್ಚು ಮಾಡಬೇಕು. ಅಧಿಕಾರಿಗಳು ಈ ಬಗ್ಗೆ ಕಟ್ಟುನಿಟ್ಟಿನ ಕ್ರಮ ತೆಗೆದುಕೊಳ್ಳಬೇಕು. ಆನೆಗಳ ಮುಂದೆ ಫೋಟೊ, ವಿಡಿಯೋ ಸೆಲ್ಫಿ ತೆಗೆದುಕೊಳ್ಳುವುದಕ್ಕೆ ಅವಕಾಶ ಕೊಡಬಾರದು ಎಂದಿದ್ದಾರೆ.
ಮಹಿಷಾ ದಸರಾ ಆಚರಣೆ ವಿಚಾರವಾಗಿ ಪ್ರತಿಕ್ರಿಯಿಸಿ, ಸಂವಿಧಾನ ದೃಷ್ಟಿಯಲ್ಲಿ ಸಾರ್ವಜನಿಕ ಸ್ಥಳಗಳಲ್ಲಿ ಮಾಡಿದರೆ ತೊಂದರೆ ಇಲ್ಲ. ಯಾರಿಗೂ ಯಾವುದೇ ರೀತಿಯ ಹಾನಿಯಾಗದ ರೀತಿ ಕಾರ್ಯಕ್ರಮ ಮಾಡಿಕೊಳ್ಳಬಹುದು. ಅದನ್ನ ಯಾರು ನಿಲ್ಲಿಸಲು ಸಾಧ್ಯವಿಲ್ಲ. ತಾಯಿ ಚಾಮುಂಡೇಶ್ವರಿಯಲ್ಲಿ ನಂಬಿಕೆಯಿಟ್ಟ ಎಲ್ಲರೂ ಮತ್ತು ಧರ್ಮದಲ್ಲಿ ನಂಬಿಕೆ ಇಟ್ಟ ಎಲ್ಲರ ಭಾವನೆಗೆ ಧಕ್ಕೆಯಾಗದ ರೀತಿ ನೋಡಿಕೊಳ್ಳಿ ಎಂದಿದ್ದಾರೆ.