ಯಾದಗಿರಿ : ಶಹಾಪುರದ ಸರಕಾರಿ ಗೋದಾಮಿನಲ್ಲಿ ಕಳೆದ ವರ್ಷದ ಡಿಸೆಂಬರ್ ನಲ್ಲಿ ನಡೆದಿದ್ದ 2.66 ಕೋಟಿ ಅಕ್ಕಿ ಕಳವು ಪ್ರಕರಣಕ್ಕೆ ಮಹತ್ವದ ತಿರುವು ಸಿಕ್ಕಿದ್ದು, ಕಳ್ಳತನದ ದೂರು ನೀಡಿದ್ದ ಅಧಿಕಾರಿಯೇ ಆರೋಪಿಯಾಗಿದ್ದಾನೆ.
ಏನಿದು ಪ್ರಕರಣ? 2023 ಡಿ.4ರಂದು ಶಹಾಪುರ ಪೊಲೀಸ್ ಠಾಣೆ ಯಲ್ಲಿ, ಸರಕಾರಿ ಗೋದಾಮಿನಲ್ಲಿ 6,677 ಕ್ವಿಂಟಾಲ್ ಅಕ್ಕಿ ಕಳ್ಳತನವಾಗಿರುವ ಕುರಿತು ಯಾದ ಗಿರಿ ಜಿಲ್ಲಾ ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕರ ಉಪ ನಿರ್ದೇಶಕರಾಗಿದ್ದ ಭೀಮರಾಯಈ ಕುರಿತು ತನಿಖೆ ನಡೆಸಿರುವ ಪೊಲೀಸರು 17 ಜನರ ವಿರುದ್ಧ ದೋಷಾರೋಪ ಪಟ್ಟಿ ಸಲ್ಲಿಸಿದ್ದಾರೆ.
ದೂರು ನೀಡಿದ್ದ ಆಹಾರ ನಾಗರಿಕ ಸರಬರಾಜು ಇಲಾಖೆ ಉಪನಿರ್ದೇಶಕರಾಗಿದ್ದ ಭೀಮರಾಯ ಮಸಾಳಿ 14ನೇ ಆರೋಪಿಯಾಗಿರುವುದುಬಹಿರಂಗವಾಗಿದೆ. ಅಲ್ಲದೆ ಅವರ ಜೊತೆಗೆ ಶಹಾಪುರ ಆಹಾರ ನಿರೀಕ್ಷಕ ವಿಜಯರೆಡ್ಡಿ, ಶಿರಸ್ತೇದಾರೆ ಪ್ರಮೀಳಾ, ವಡಗೇರಾ ಆಹಾರ ನಿರೀಕ್ಷಕ ನಾಗಪ್ಪ ಸಹ ಆರೋಪಿಯಾಗಿದ್ದಾರೆ.
ಕಳೆದ 9 ತಿಂಗಳಿನಿಂದ ತನಿಖೆ ನಡೆಸಿ ಆರೋಪಿಮಸಾಳಿ, ತಾಲೂಕಾ ಒಕ್ಕಲುತನ ಹುಟ್ಟುವಳಿ ಸಹಕಾರ ಸಂಘ ನಿಯಮಿತ ವಿರುದ್ದ ದೂರು ದಾಖಲಿಸಿದ್ದರು.ಈ ದೂರಿನ ಮೇರೆಗೆ ತನಿಖೆ ಕೈಗೊಂಡು 9 ತಿಂಗಳ ನಂತರ ಇದೀಗ ನ್ಯಾಯಾಲಯಕ್ಕೆ ದೋಷಾ ರೋಪ ಪಟ್ಟಿ ಸಲ್ಲಿಸಿದ್ದಾರೆ.
52 ಲಕ್ಷ ರು.ನಗದು, 1120 ಕ್ವಿಂಟಾಲ್ ಅಕ್ಕಿ(41 ಲಕ್ಷ ರು. ಮೌಲ್ಯ) ಸಾಗಣೆ ಮಾಡಲು ಬಳಸಿದ ವಿವಿಧ ವಾಹನಗಳು, ನಾಲ್ಕು ಮೊಬೈಲ್, ಜಪ್ತಿಮಾಡಿರುವ ಬಗ್ಗೆ ಪೊಲೀಸರು ಚಾರ್ಜ್‌ಶೀಟ್ ನಲ್ಲಿ ಉಲ್ಲೇಖಿಸಿದ್ದಾರೆ.
ವರದಿ :- ಸಿದ್ದು ಪಟ್ಟೇದಾರ್