28.7 C
Bengaluru
Tuesday, October 8, 2024

ಫೈಯರ್ಸ್ ಫೌಂಡೇಷನ್’ನಿಂದ ಬೆಂಗಳೂರು ಟ್ರಾಫಿಕ್ ಪೊಲೀಸರಿಗೆ ‘ರೈನ್ ಕೋಟ್’ ವಿತರಣೆ : ಉತ್ತರ ವಿಭಾಗದ ಡಿಸಿಪಿ ಸಿರಿಗೌರಿ ಅವರಿಂದ ಸ್ವೀಕಾರ

Date:

ಭಾರತದ ಮುಂಚೂಣಿಯ ಟ್ರೇಡಿಂಗ್ ಮತ್ತು ಹೂಡಿಕೆಯ ಪ್ಲಾಟ್ ಫಾರಂ ಫೈಯರ್ಸ್ (FYERS) ಬೆಂಗಳೂರಿನ ಟ್ರಾಫಿಕ್ ಪೊಲೀಸ್ ಪಡೆಗೆ ಬೆಂಬಲಿಸುವ ಸಾಮಾಜಿಕ ಉಪಕ್ರಮ ಪ್ರಾರಂಭಿಸಿದೆ. ಈ ಉಪಕ್ರಮದ ಭಾಗವಾಗಿ ಫೈಯರ್ಸ್ ಸಿ.ಎಸ್.ಆರ್. ಅಂಗ ಫೈಯರ್ಸ್ ಫೌಂಡೇಷನ್ ಉನ್ನತ ಗುಣಮಟ್ಟದ ರೈನ್ ಕೋಟ್ ಗಳನ್ನು ನಗರದ ಪ್ರಮುಖ ವೃತ್ತಗಳಲ್ಲಿರುವ 1,400ಕ್ಕೂ ಹೆಚ್ಚು ಟ್ರಾಫಿಕ್ ಸಿಬ್ಬಂದಿಗೆ ವಿತರಣೆ ಮಾಡಿತು.

ಈ ರೈನ್ ಕೋಟ್ ಗಳನ್ನು ಅಧಿಕೃತವಾಗಿ ಬೆಂಗಳೂರಿನ ಉತ್ತರ ವಿಭಾಗದ ಸಂಚಾರ ಡಿಸಿಪಿ ಸಿರಿ ಗೌರಿ ಡಿ,ಆರ್. ಐಪಿಎಸ್ ಅವರಿಗೆ ಫೈಯರ್ಸ್ ಸಹ-ಸಂಸ್ಥಾಪಕ ಮತ್ತು ಸಿಇಒ ತೇಜಸ್ ಖೋಡೇ ಅವರ ನೇತೃತ್ವದ ಸಂಸ್ಥಾಪಕರು ಹಸ್ತಾಂತರಿಸಿದರು.

ಬೆಂಗಳೂರಿನಲ್ಲಿ ಮಳೆಗಾಲದ ತಿಂಗಳುಗಳು ಟ್ರಾಫಿಕ್ ಅಧಿಕಾರಿಗಳಿಗೆ ಗಮನಾರ್ಹ ಸವಾಲುಗಳನ್ನು ಉಂಟು ಮಾಡುತ್ತವೆ, ಅವರು ಅತಿಯಾದ ಮಳೆಯಲ್ಲಿ ಸರಾಗವಾಗಿ ಟ್ರಾಫಿಕ್ ಸಂಚಾರಕ್ಕೆ ಮತ್ತು ಸಾರ್ವಜನಿಕರ ಸುರಕ್ಷತೆಗೆ ಶ್ರಮಿಸುತ್ತಾರೆ.

ಈ ಉಪಕ್ರಮದ ಮೂಲಕ ಫೈಯರ್ಸ್ ಪ್ರತಿಕೂಲ ಪರಿಸ್ಥಿತಿಗಳಲ್ಲಿ ಟ್ರಾಫಿಕ್ ನಿರ್ವಹಣೆಯ ಅಸೌಖ್ಯ ಮತ್ತು ರಿಸ್ಕ್ ಅನ್ನು ನಿವಾರಿಸುವ ಗುರಿ ಹೊಂದಿದೆ.ಈ ಉಪಕ್ರಮದ ಕುರಿತು ತೇಜ್ ಖೋಡೇ, “ನಮ್ಮ ಟ್ರಾಫಿಕ್ ಪೊಲೀಸ್ ಅಧಿಕಾರಿಗಳು ನಮ್ಮ ರಸ್ತೆಗಳನ್ನು ಸುರಕ್ಷಿತವಾಗಿರಿಸಲು ದಣಿವಿರದೆ ಶ್ರಿಸುತ್ತಾರೆ. ಅವರಿಗೆ ರೈನ್ ಕೋಟ್ ಗಳನ್ನು ಪೂರೈಸುವ ಮೂಲಕ ನಾವು ಅವರ ಕೆಲ ದೈನಂದಿನ ಸವಾಲುಗಳನ್ನು ನಿವಾರಿಸುವ ಮತ್ತು ಅವರ ಬದ್ಧತೆಗೆ ನಮ್ಮ ಕೃತಜ್ಞತೆ ತೋರುವ ಕೆಲಸ ಮಾಡುತ್ತಿದ್ದೇವೆ.

ಫೈಯರ್ಸ್ ನಲ್ಲಿ ನಾವು ಸಮಾಜದಲ್ಲಿ ಸಮಾಜಕ್ಕೆ ಹಿಂದಕ್ಕೆ ನೀಡುವುದರಲ್ಲಿ ಸಕ್ರಿಯ ಪಾತ್ರ ವಹಿಸುವ ನಂಬಿಕೆ ಇರಿಸಿದ್ದೇವೆ ಮತ್ತು ಇದು ನಾವು ಸಮಾಜದಲ್ಲಿ ಸಕಾರಾತ್ಮಕ ಪರಿಣಾಮ ಸೃಷ್ಟಿಸುವಲ್ಲಿ ನಾವು ಕೈಗೊಳ್ಳುವ ಹಲವಾರು ಕ್ರಮಗಳಲ್ಲಿ ಒಂದಾಗಿದೆ. ನಾವು ಈ ಕಾರ್ಯಕ್ರಮವನ್ನು ಭವಿಷ್ಯದಲ್ಲಿ ಹೆಚ್ಚು ಜನರಿಗೆ ವಿಸ್ತರಿಸುವ ಭರವಸೆ ಹೊಂದಿದ್ದೇವೆ” ಎಂದರು.

ಈ ಉಪಕ್ರಮವು ಫೈಯರ್ಸ್ ನ ಸಮಾಜಕ್ಕೆ ಕೊಡುಗೆ ನೀಡುವ ವಿಸ್ತಾರ ಗುರಿಯ ಭಾಗವಾಗಿದೆ ಮತ್ತು ನಾಗರಿಕ ಸುಸ್ಥಿತಿಯನ್ನು ನಿರ್ವಹಿಸುವಲ್ಲಿ ಪ್ರಮುಖ ಪಾತ್ರ ವಹಿಸಲು ಕಾನೂನು ಪಾಲನಾ ಸಂಸ್ಥೆಗಳಿಗೆ ಬೆಂಬಲಿಸುತ್ತದೆ. ಫೈಯರ್ಸ್ ಹಣಕಾಸು ವಲಯ ಮೀರಿ ಕಾರ್ಪೊರೇಟ್ ಜವಾಬ್ದಾರಿಗೆ ಬದ್ಧವಾಗಿದ್ದು ಪ್ರಾಯೋಗಿಕ ಮತ್ತು ಅರ್ಥಪೂರ್ಣ ಕೊಡುಗೆಗಳನ್ನು ನೀಡಲು ಉದ್ದೇಶಿಸಿದೆ.

Latest Stories

LEAVE A REPLY

Please enter your comment!
Please enter your name here