ಮಹದೇವಪುರ ಪೊಲೀಸರು ಕಾರ್ಯಾಚರಣೆ ನಡೆಸಿ ಹಗಲು ವೇಳೆಯಲ್ಲಿಯೇ ಮನೆಗಳಿಗೆ ಕನ್ನ ಹಾಕಿ ಕಳವು ಮಾಡುತಿದ್ದ ಆರೋಪಿ ಚೇತನ್ ಕುಮಾರ್ ನನ್ನು ಬಂಧಿಸುವಲ್ಲಿ ಯಶಸ್ವಿ ಯಾಗಿದ್ದಾರೆ.ತನ್ನ ಸಹಚರನ ಜೊತೆ ಸೇರಿಕೊಂಡು ಹಗಲು ವೇಳೆಯಲ್ಲಿ ಮಹದೇವಪುರ ಪೊಲಿಸ್ ರಾಣಾ ಸರಹದ್ದಿನ ಒಬ್ಬಯ್ಯ ಲೇಔಟ್ ನಲ್ಲಿರುವ ಒಂದು ವಾಸದ ಮನೆಯ ಬಾಗಿಲಿನ ಲಾಕ್ ಮುರಿದು ಮನೆಯಲ್ಲಿದ್ದ ಚಿನ್ನದ ಆಭರಣಗಳನ್ನು ಕಳವು ಮಾಡಿಕೊಂಡು ಹೋಗಿದ್ದು, ಈ ಬಗ್ಗೆ ಪಿರ್ಯಾದುದಾರರು ನೀಡಿದ ದೂರಿನ ಮೇರೆಗೆ ಮಹದೇವಪುರ
ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.
ಪ್ರಕರಣದ ತನಿಖಾ ಕಾಲದಲ್ಲಿ ಈ ಮೇಲ್ಕಂಡ ಆರೋಪಿಯನ್ನು ದಸ್ತಗಿರಿ ಮಾಡಿ ಆರೋಪಿಯನ್ನು ಪ್ರಕರಣಕ್ಕೆ ಸಂಬಂಧಪಟ್ಟಂತೆ ಕೂಲಂಕುಶವಾಗಿ ವಿಚಾರಣೆ ಮಾಡಲಾಗಿ ಆರೋಪಿಯ ತನ್ನ ಸಹಚರನ ಜೊತೆ ಸೇರಿಕೊಂಡು 2021 ನೇ ಸಾಲಿನ ಡಿಸೆಂಬರ್ ತಿಂಗಳಿನಲ್ಲಿ ಆಸ್ ಪ್ಯಾಕ್ಟರಿ ಬಸ್ ನಿಲ್ದಾಣದ ಬಳಿಯಲ್ಲಿ ಬಸ್ಸಿನಲ್ಲಿ ಆಸಾಮಿಯ ಬಳಿಯಿಂದ ಒಂದು ಚಿನ್ನದ ಚಿನ್ ಅನ್ನು ಕಳವು ಮಾಡಿರುವುದಾಗಿ ತಿಳಿಸಿದ್ದು, ಆರೋಪಿಯ ಹೇಳಿಕೆಯ ಮೇರೆಗೆ ಮಹದೇವಪುರ ಪೊಲೀಸ್ ಠಾಣೆಯ ು ಎರಡು ಅಪರಾಧ ಪ್ರಕರಣಗಳು ಪತ್ತೆಯಾಗಿದ್ದು ಆರೋಪಿಯ ಹೇಳಿಕೆಯ ಮೇರೆಗೆ ಸುಮಾರು 8,00000/- (ಎಂಟು ಲಕ್ಷ ರೂಪಾಯಿ ಮೌಲ್ಯದ 164 ಗ್ರಾಂ ತೂಕದ ಚಿನ್ನದ ಆಭರಣಗಳನ್ನು ಅಮಾನತ್ತುಪಡಿಸಿಕೊಂಡಿರುತ್ತಾರೆ.
ವೈಟ್ ಫೀಲ್ಡ್ ವಿಭಾಗದ ಉಪ ಪೊಲೀಸ್ ಆಯುಕ್ತರಾದ ಶ್ರೀ ಗಿರೀಶ್.ಎಸ್ ಹಾಗೂ ವೈಟ್ ಫೀಲ್ಡ್ ಉಪ ವಿಭಾಗದ ಸಹಾಯಕ ಪೊಲೀಸ್ ಆಯುಕ್ತರಾದ ಶ್ರೀ ಶಾಂತಮಲ್ಲಪ್ಪ ರವರ ಮಾರ್ಗದರ್ಶನದಲ್ಲಿ ಈ ಕಾರ್ಯಚರಣೆಯಲ್ಲಿ ಕರ್ತವ್ಯ ನಿರ್ವಹಿಸಿದ ಶ್ರೀ ಪ್ರಶಾಂತ್ ವರ್ಣಿ ಪೊಲೀಸ್ ಇನ್ಸ್ ಮತ್ತು ಶ್ರೀ ವಿನೋದ್ ಕುಮಾರ್.ಬಿ ಪಿ.ಎಸ್.ಐ ಹಾಗೂ ಸಿಬ್ಬಂದಿಗಳಾದ ಶ್ರೀ ಚಂದ್ರಪ್ಪ, ಶ್ರೀ. ಬಾಸ್ಕರ್, ಶ್ರೀ ರಾಜೇಂದ್ರ, ಶ್ರೀ ನಂಜಯ್ಯ, ಶ್ರೀ ಭೀಮತಿ, ಶ್ರೀ ರೋಷನ್, ಶ್ರೀ ಸಂಜಯ್ ರಾಥೋಡ್, ಶ್ರೀ ಲಕ್ಷ್ಮಣ್ ಗಾಯಕವಾಡ, ಮತ್ತು ಸಂತೋಷ ರವರು ಆರೋಪಿ ಮತ್ತು ಮಾಲನ್ನು ಪತ್ತೆ ಮಾಡುವಲ್ಲಿ ಯಶಸ್ವಿಯಾಗಿರುತ್ತಾರೆ.
*ವೈಟ್‌ಫೀಲ್ಡ್ ವಿಭಾಗದ ಮಹದೇವಪುರ ಪೊಲೀಸರ ಕಾರ್ಯಾಚರಣೆ *
Date: