ಕಬ್ಬನ್ ಪಾರ್ಕ್ ಪೊಲೀಸ್ ಠಾಣೆಯ ಪೇದೆಗೆ ಸಿಕ್ಕ ಒಂದು ವಿಡಿಯೋದಿಂದ ಒಂಬತ್ತು ತಿಂಗಳ ಹಿಂದೆ ನಡೆದಿದ್ದ ಕೊಲೆ ಪ್ರಕರಣವನ್ನು ಕಬ್ಬನ್ ಪಾರ್ಕ್ ಪೊಲೀಸ್ ಇನ್ಸ್ಪೆಕ್ಟರ್ ಚೈತನ್ಯ.ಸಿ.ಜೆ ಮತ್ತವರ ಸಿಬ್ಬಂದಿಗಳು ಬೇಧಿಸಿದ್ದಾರೆ.
ತಮಗೆ ಸಿಕ್ಕ ವಿಡಿಯೋ ಬೆನ್ನಹತ್ತಿದ ಕಬ್ಬನ್ ಪಾರ್ಕ್ ಪೊಲೀಸರು ಕಿಡ್ನಾಪ್ ಹಾಗೂ ಮರ್ಡರ್ ಮಿಸ್ಟರಿ ಯನ್ನು ಬಯಲು ಮಾಡಿದ್ದಾರೆ.
ಕೋಣನಗುಂಟೆ ಸಮೀಪದ ಕೊತ್ತನೂರು ನಿವಾಸಿಯಾದ ಶರತ್ ನ ಕಿಡ್ನಾಪ್ ಹಾಗೂ ಮರ್ಡರ್ ಕಥೆ ಇದು,
ಇದೇ ವರ್ಷ ಮಾರ್ಚ 22 ರಂದು ಶರತ್ ನನ್ನು ಬನಶಂಕರಿ ಬಸ್ ನಿಲ್ದಾಣದಲ್ಲಿ ಕಾರಿನಲ್ಲಿ ಕೆಲ ವ್ಯಕ್ತಿಗಳು ಕಿಡ್ನಾಪ್ ಮಾಡಿದ್ದರು, ಆತನನ್ನು ಕಿಡ್ನಾಪ್ ಮಾಡಿದ ವ್ಯಕ್ತಿಯ ಹೆಸರು ಕೂಡ ಶರತ್ .ಕೋಣನಕುಂಟೆಯ ಶರತ್ ನನ್ನ ಕಿಡ್ನಾಪ್ ಮಾಡಿ ತನ್ನ ಚಿಕ್ಕಬಳ್ಳಾಪುರದ ತೋಟದ ಮನೆಗೆ ಕರೆದುಕೊಂಡು ಹೋಗುತ್ತಾರೆ.ಅಲ್ಲಿ ಶರತ್ ನನ್ನು ಒಂದು ಮರಕ್ಕೆ ಕಟ್ಟಿ ಸಿಕ್ಕಾಪಟ್ಟೆ ಹೊಡೆಯುತ್ತಾರೆ,
ಹೊಡೆತವನ್ನು ತಾಳಲಾರದೆ ಶರತ್ ಚಿಕ್ಕಬಳ್ಳಾಪುರದ ತೋಟದ ಮನೆಯಲ್ಲೇ ಸಾವನ್ನಪ್ಪಿದ್ದಾನೆ.
ಶರತ್ ಸಾವಿನ ಬಳಿಕ ಭಯಗೊಂಡು ಕಿಡ್ನಾಪ್ ಮಾಡಿದ್ದ ವ್ಯಕ್ತಿಗಳು,ಶರತ್ ಬಾಡಿಯನ್ನು ಒಂದು ಗೋಣಿ ಚೀಲದಲ್ಲಿ ಕಟ್ಟಿ ಚಾರ್ಮಾಡಿ ಘಾಟ್ ನಲ್ಲಿ ಎಸೆದು ಬಂದಿರುತ್ತಾರೆ.ಯಾರಿಗೂ ಅನುಮಾನ ಬರಬಾರದು ಅಂತಾ ಶರತ್ ನಿಂದಲ್ಲೇ ಆತನ ತಂದೆ ತಾಯಿಗೆ ಪೋನ್ ಮಾಡಿಸಿ ಹೊರರಾಜ್ಯಕ್ಕೆ ಹೋಗುತ್ತಿದ್ದೇನೆ ,ಯಾರು ಹುಡುಕಬೇಡಿ ಅಂತಾ ಹೇಳಿಸಿರ್ತಾರೆ,
ಹಾಗಾಗಿ ಕಳೆದ ಒಂಭತ್ತು ತಿಂಗಳಿಂದ ಶರತ್ ಪೋಷಕರು ಯಾವುದೇ ಕಂಪ್ಲೇಂಟ್ ಕೊಟ್ಟಿರಲಿಲ್ಲ.
ಇದೀಗ ಕಬ್ಬನ್ ಪಾರ್ಕ್ ಪೊಲೀಸರಿಗೆ ಶರತ್ ಗೆ ಥಳಿಸಿರುವ ವಿಡಿಯೋಗಳು ಸೋಶಿಯಲ್ ಮಿಡಿಯಾದಲ್ಲಿ ಸಿಕ್ಕಿರುತ್ತವೆ.
ಸಾಮಾಜಿಕ ಜಾಲತಾಣದಲ್ಲಿ ಅಪ್ಲೋಡ್ ಆದ ವಿಡಿಯೋ ಬೆನ್ನುಹತ್ತಿದ ಕಬ್ಬನ್ ಪಾರ್ಕ್ ಪೊಲೀಸರು ಇದೀಗ ಐದು ಜನ ಆರೋಪಿಗಳನ್ನು ಬಂಧಿಸಿದ್ದಾರೆ.
ಶರತ್,ಧನುಷ್,ವೆಂಕಟಾಚಲಪತಿ,ಶ್ರೀಧರ್ ಹಾಗೂ ಮಂಜುನಾಥ ಬಂಧಿತ ಆರೋಪಿಗಳು.
ಇದೀಗ ಬಂಧಿತ ಆರೋಪಿಯಾದ ಶರತ್ನಿಂದ ಕೊಲೆಯಾದ ಶರತ್ 20 ಲಕ್ಷ ಹಣವನ್ನು ಪಡೆದಿದ್ದ.ಕೊಲೆಯಾದ ಶರತ್, ಚಿಕ್ಕಬಳ್ಳಾಪುರದ ಶರತ್ ಗೆ ಟೆಂಡರ್ ಕೊಡಸತ್ತೀನಿ ಅಂತಾ 20 ಲಕ್ಷ ಹಣ ಪಡೆದುಕೊಂಡಿದ್ದ ,ಆದರೆ ಯಾವುದೇ ಟೆಂಡರ್ ಕೊಡಸಲಿಲ್ಲ ಹಾಗೂ ಹಣವನ್ನು ಕೂಡ ವಾಪಾಸ್ ಕೊಡಲಿಲ್ಲ.
ಹಣವನ್ನು ವಾಪಾಸ್ ನೀಡಲಿಲ್ಲವೆಂಬ ಕಾರಣಕ್ಕೆ ಶರತ್ ನನ್ನು ಕಿಡ್ನಾಪ್ ಮಾಡಿ ಹಲ್ಲೆ ಮಾಡಿದ್ದಾರೆ,
ಹಾಗೇ ಶರತ್ ಮೊಬೈಲ್ ನನ್ನು ಯಾವುದೋ ಲಾರಿಯ ಮೇಲೆ ಹಾಕಿ ಕಳಸುಹಿಸಿದ್ದಾರೆ, ಆದರೆ ಇದೀಗ ಕಬ್ಬನ್ ಪಾರ್ಕ್ ಪೊಲೀಸರು ಒಂಬತ್ತು ತಿಂಗಳ ಹಿಂದೆ ನಡೆದಿದ್ದ ಕೊಲೆ ಪ್ರಕರಣವನ್ನು ಚಾಣಾಕ್ಷ ತನಿಖೆ ನಡೆಸಿ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಆದರೆ ಇನ್ನೂ ಕೂಡ ಶರತ್ ಮೃತ ದೇಹ ಪತ್ತೆಯಾಗಿಲ್ಲ ,ಶರತ್ ಮೃತ ದೇಹಕ್ಕಾಗಿ ಚಾರ್ಮಾಡಿ ಘಾಟ್ ನಲ್ಲಿ ಕಬ್ಬನ ಪಾರ್ಕ್ ಪೊಲೀಸರು ಶೋಧ ನಡೆಸುತ್ತಿದ್ದಾರೆ.
ಕಬ್ಬನ್ ಪಾರ್ಕ್ ಪೊಲೀಸರ ಚಾಣಾಕ್ಷ ತನಿಖೆ
Date: